.. On 09-Jan-2016 6:18 PM, "Dr. U.B. Pavanaja" pavanaja@vishvakannada.com wrote:
ನಮಸ್ಕಾರ,
ಕನ್ನಡ ವಿಕಿಪೀಡಿಯಕ್ಕೆ ಹೊಸದಾಗಿ ಸದಸ್ಯರಾಗುವವರಿಗೆ ಸಹಾಯ ಮಾಡಲು ಟ್ಯಟೋರಿಯಲ್ < https://commons.wikimedia.org/wiki/File:Wikipedia_Editing_Tutorial_Kannada.p... ಫೈಲ್ ಮತ್ತು < https://commons.wikimedia.org/wiki/Category:Learn_to_edit_Kannada_Wikipedia%... ವೀಡಿಯೋಗಳು ಲಭ್ಯವಿವೆ. ಕನ್ನಡ ವಿಕಿಪೀಡಿಯ ಎಂದರೆ ಏನು ಎಂದು ವಿವರಿಸುವ < https://commons.wikimedia.org/wiki/File:Kannada_Wikipedia_Brochure.pdf%3E ಕರಪತ್ರವೂ ಇದೆ. ಈಗಾಗಲೇ ಇರುವ ಈ ಟ್ಯುಟೋರಿಯಲ್ ವೀಡಿಯೋಗಳು ಪರಿಪೂರ್ಣವಲ್ಲ. < https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%... ಅವುಗಳನ್ನು ಉತ್ತಮ ಪಡಿಸಬೇಕಾಗಿದೆ. ಇಂಗ್ಲಿಶ್ ಭಾಷೆಯಲ್ಲಿ ಲಭ್ಯವಿರುವ ಹಲವು ಕಡತಗಳನ್ನು ಕನ್ನಡೀಕರಿಸಬೇಕಾಗಿದೆ. ಈ ವಿಷಯಗಳಲ್ಲಿ ಮುಂದುವರೆಯಲು ಸಮುದಾಯದ ಸಹಯೋಗ ಬೇಕಾಗಿದೆ. ಇನ್ನೂ ಯಾವ ಯಾವ ಕಡತಗಳು ಮತ್ತು ವೀಡಿಯೋಗಳು ಬೇಕಾಗಿವೆ ಎಂಬುದಾಗಿ ಸಮುದಾಯವು ಸೂಚಿಸಬೇಕು.
ಮೈಸೂರಿನಲ್ಲಿ ಚರ್ಚೆ ಮಾಡೋಣ
ಮೈಸೂರಿನಲ್ಲಿ ಜನವರಿ ೧೧, ೨೦೧೬ ರಿಂದ ೧೩, ೨೦೧೬ ರ ತನಕ ಸಂಪಾದನೋತ್ಸವ ನಡೆಯಲಿದೆ. ವಿವರಗಳು ಈ < https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%... ಪುಟದಲ್ಲಿವೆ. ಆ ಪ್ರಯುಕ್ತ ನಾನು ಈ ಮೂರು ದಿನಗಳಲ್ಲಿ ಮೈಸೂರಿನಲ್ಲಿರುತ್ತೇನೆ. ಈ ಸಂದರ್ಭದಲ್ಲಿ ಕನ್ನಡ ವಿಕಿಪೀಡಿಯಕ್ಕೆ ಅಗತ್ಯ ಸಹಾಯ ಕಡತ ಮತ್ತು ವೀಡಿಯೋಗಳ ತಯಾರಿ ಬಗ್ಗೆ ಚರ್ಚೆ ಮಾಡೋಣ. ನಾನು ಮಾನಸ ಗಂಗೋತ್ರಿಯಲ್ಲಿರುತ್ತೇನೆ. ದಯವಿಟ್ಟು ಅಲ್ಲಿಗೆ ಬಂದು ಸಲಹೆ ನೀಡಬೇಕಾಗಿ ವಿನಂತಿ. ಸಾಯಂಕಾಲ ೬ ಗಂಟೆಯ ನಂತರ ಬೇರೆ ಯಾವ ಸ್ಥಳದಲ್ಲಾದರೂ ಭೇಟಿ ಮಾಡಲು ನಾನು ಸಿದ್ಧ. ದಯವಿಟ್ಟು ಸಂಪರ್ಕಿಸಬೇಕಾಗಿ ವಿನಂತಿ.
ಇತಿ,
ಪವನಜ
Wikikn-l mailing list Wikikn-l@lists.wikimedia.org https://lists.wikimedia.org/mailman/listinfo/wikikn-l