..
On 09-Jan-2016 6:18 PM, "Dr. U.B. Pavanaja" <pavanaja(a)vishvakannada.com>
wrote:
ನಮಸ್ಕಾರ,
ಕನ್ನಡ ವಿಕಿಪೀಡಿಯಕ್ಕೆ ಹೊಸದಾಗಿ ಸದಸ್ಯರಾಗುವವರಿಗೆ ಸಹಾಯ ಮಾಡಲು ಟ್ಯಟೋರಿಯಲ್ <
https://commons.wikimedia.org/wiki/File:Wikipedia_Editing_Tutorial_Kannada.…
ಫೈಲ್ ಮತ್ತು <
https://commons.wikimedia.org/wiki/Category:Learn_to_edit_Kannada_Wikipedia…
ವೀಡಿಯೋಗಳು ಲಭ್ಯವಿವೆ. ಕನ್ನಡ ವಿಕಿಪೀಡಿಯ ಎಂದರೆ ಏನು ಎಂದು ವಿವರಿಸುವ <
https://commons.wikimedia.org/wiki/File:Kannada_Wikipedia_Brochure.pdf>
ಕರಪತ್ರವೂ ಇದೆ. ಈಗಾಗಲೇ ಇರುವ ಈ ಟ್ಯುಟೋರಿಯಲ್ ವೀಡಿಯೋಗಳು ಪರಿಪೂರ್ಣವಲ್ಲ. <
https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA…
ಅವುಗಳನ್ನು ಉತ್ತಮ ಪಡಿಸಬೇಕಾಗಿದೆ. ಇಂಗ್ಲಿಶ್ ಭಾಷೆಯಲ್ಲಿ ಲಭ್ಯವಿರುವ ಹಲವು ಕಡತಗಳನ್ನು
ಕನ್ನಡೀಕರಿಸಬೇಕಾಗಿದೆ. ಈ ವಿಷಯಗಳಲ್ಲಿ ಮುಂದುವರೆಯಲು ಸಮುದಾಯದ ಸಹಯೋಗ ಬೇಕಾಗಿದೆ. ಇನ್ನೂ
ಯಾವ ಯಾವ ಕಡತಗಳು ಮತ್ತು ವೀಡಿಯೋಗಳು ಬೇಕಾಗಿವೆ ಎಂಬುದಾಗಿ ಸಮುದಾಯವು ಸೂಚಿಸಬೇಕು.
ಮೈಸೂರಿನಲ್ಲಿ ಚರ್ಚೆ ಮಾಡೋಣ
ಮೈಸೂರಿನಲ್ಲಿ ಜನವರಿ ೧೧, ೨೦೧೬ ರಿಂದ ೧೩, ೨೦೧೬ ರ ತನಕ ಸಂಪಾದನೋತ್ಸವ ನಡೆಯಲಿದೆ.
ವಿವರಗಳು ಈ <
https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA…
ಪುಟದಲ್ಲಿವೆ. ಆ ಪ್ರಯುಕ್ತ ನಾನು ಈ ಮೂರು ದಿನಗಳಲ್ಲಿ ಮೈಸೂರಿನಲ್ಲಿರುತ್ತೇನೆ. ಈ
ಸಂದರ್ಭದಲ್ಲಿ ಕನ್ನಡ ವಿಕಿಪೀಡಿಯಕ್ಕೆ ಅಗತ್ಯ ಸಹಾಯ ಕಡತ ಮತ್ತು ವೀಡಿಯೋಗಳ ತಯಾರಿ ಬಗ್ಗೆ
ಚರ್ಚೆ ಮಾಡೋಣ. ನಾನು ಮಾನಸ ಗಂಗೋತ್ರಿಯಲ್ಲಿರುತ್ತೇನೆ. ದಯವಿಟ್ಟು ಅಲ್ಲಿಗೆ ಬಂದು ಸಲಹೆ
ನೀಡಬೇಕಾಗಿ ವಿನಂತಿ. ಸಾಯಂಕಾಲ ೬ ಗಂಟೆಯ ನಂತರ ಬೇರೆ ಯಾವ ಸ್ಥಳದಲ್ಲಾದರೂ ಭೇಟಿ ಮಾಡಲು
ನಾನು ಸಿದ್ಧ. ದಯವಿಟ್ಟು ಸಂಪರ್ಕಿಸಬೇಕಾಗಿ ವಿನಂತಿ.
ಇತಿ,
ಪವನಜ
_______________________________________________
Wikikn-l mailing list
Wikikn-l(a)lists.wikimedia.org
https://lists.wikimedia.org/mailman/listinfo/wikikn-l