ಸರ್,
ನಾನು ಡಾ.ಅಮ್ಮಸಂದ್ರ ಸುರೇಶ್ ರವರ ಕುರಿತು ಲೇಖವನ್ನು ಬರೆದಿದ್ದೆ. ಆದರೆ ಜಾಹೀರಾತು
ಮಾದರಿಯ ಲೇಖನ ಎಂದು ಲೇಖನವನ್ನು ಅಳಿಸಿದ್ದೀರಿ. ಬೇರೆಯವರ ಕುರಿತು ವಿಕಿಪೀಡಿಯಾದಲ್ಲಿ
ಇಂತಹ ಸಾಕಷ್ಟು ಲೇಖನಗಳಿವೆ. ಇವುಗಳನ್ನು ಗಮನಿಸಿಯೇ ನಾನು ಅಮ್ಮಸಂದ್ರ ಸುರೇಶ್ ರವರ ಕುರಿತು
ಲೇಖನ ಬರೆದದ್ದು. ಅವರ ಕುರಿತು ನಾನು ಸುಳ್ಳನ್ನೇನೂ ಬರೆದಿಲ್ಲ. ಬೇಕಿದ್ದರೆ ನೀವು ಒಮ್ಮೆ
ವಿಮರ್ಶಿಸಬಹುದು. ಅಥವಾ ಲೇಖನದಲ್ಲಿರುವ ಯಾವುದೇ ಅಂಶ ಸರಿಯಿಲ್ಲ ಎನಿಸಿದರೆ ಅದಕ್ಕೆ ಸೂಕ್ತ
ದಾಖಲೆಗಳನ್ನು ಕೊಡುತ್ತೇನೆ. ಸಾದಕರೊಬ್ಬರ ಕುರಿತು ಲೇಖನ ಬರೆದಾಗ ಅದನ್ನು ಮುಕ್ತ
ಮನಸ್ಸಿನಿಂದ ನೋಡಬೇಕಲ್ಲವೆ? ಲೇಖಕರೆ ಅವರ ಕುರಿತು ಬರೆದದ್ದನ್ನು ಅಳಿಸಿದ್ದು ಸರಿ. ಆದರೆ
ನಾನು ಬರೆದದ್ದನ್ನು ಅಳಿಸಿದ ಕಾರಣ ಸರಿ ಎನಿಸುವುದಿಲ್ಲ. ನಾನು ಬರೆದಿರುವ ಲೇಖನ
ಸರಿಯಾಗಿದೆ ಹಾಗೂ ಯಾರನ್ನಾದರೂ ಮೆಚ್ಚಿಸಬೇಕೆಂಬುದು ನನ್ನ ಲೇಖನದ ಗುರಿಯಲ್ಲ. ದಯಮಾಡಿ
ಮತ್ತೆ ಪ್ರಕಟಿಸಬೇಕಾಗಿ ಮನವಿ ಮಾಡುತ್ತೇನೆ.