ಮನ ಅವರೇ ನೀವು ಹೇಳ್ತಿರೋ ವಿಷಯದಲ್ಲಿ ನನ್ನದೂ ಸಹಭಾಗಿತ್ವ ಇದೆ. ನನ್ನ ಚಿಂತನೆಗಳೂ ಇದೇ ದಿಕ್ಕಿನಲ್ಲಿವೆ.
ನೀವು ತಿಳಿಸಿದಂತೆಯೇ ಆಗಲಿ.
-----Original Message-----
From: wikikn-l-bounces(a)Wikipedia.org [mailto:wikikn-l-bounces@Wikipedia.org] On Behalf Of K.N. Manohar
Sent: Saturday, August 26, 2006 11:10 PM
To: Kannada Wikipedia Discussion List
Subject: [Wikikn-l (kannada wikipedia)] ????? ?????????????? ???????? ?????? ??????
***********************
No virus was detected in the attachment no filename
No virus was detected in the attachment no filename
No virus was detected in the attachment no filename
Your mail has been scanned by InterScan MSS.
***********************
The following text is in Kannada unicode. If you are not able to see it properly, please refer to this page:
http://kn.wikipedia.org/wiki/Wikipedia:Kannada_Support
====================
ಗೆಳೆಯರೆ,
ಎಲ್ಲರಿಗೂ ಗೌರಿ ಮತ್ತು ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು!
ವಿವಿಧ ಕನ್ನಡ ಚಲನಚಿತ್ರಗಳ ಬಹಳಷ್ಟು ಲೇಖನಗಳು ವಿಕಿಪೀಡಿಯದಲ್ಲಿ ಸ್ಥಾಪನೆಯಾಗಿವೆ.
ಲೇಖನದ ಹೆಸರಿನಲ್ಲಿ '(ಚಲನಚಿತ್ರ)' ಎಂದು ಸೇರಿಸಬೇಕೆ? ಬೇಡವೆ? ಸೇರಿಸಬೇಕೆಂದಿದ್ದರೆ ಯಾವಾಗ ಸೇರಿಸಬೇಕು? ಯಾವಾಗ ಸೇರಿಸುವ ಅವಶ್ಯಕತೆಯಿಲ್ಲ? ಎಂಬುದು ಚರ್ಚೆಯಾಗಬೇಕಿದೆ.
ಇದರ ಬಗ್ಗೆ ಅರಳಿಕಟ್ಟೆಯಲ್ಲಿ ಚರ್ಚೆ ಪ್ರಾರಂಭವಾಗಿ, ಕೊನೆಗೆ ಈ mailing-listನಲ್ಲಿ ಚರ್ಚೆಯಾಗಲಿ, ಇತರರ ಅಭಿಪ್ರಾಯವೂ ಧ್ವನಿಗೂಡಲಿ ಎಂದು ನಿರ್ಧಾರವಾಯಿತು. ಅದರ ಫಲವೇ, ಈ ಅಂಚೆ.
ನನ್ನ ಅಭಿಪ್ರಾಯ ಹೀಗಿದೆ:
ಚಲನಚಿತ್ರಗಳ ಹೆಸರು ವ್ಯಕ್ತಿ, ಊರು, ವಿಷಯ/ವಸ್ತುವಿನ ಹೆಸರಾಗಿದ್ದು, ಆ ಹೆಸರಿನ ಲೇಖನ ವಿಕಿಪೀಡಿಯದಲ್ಲಿ ಬರುವ ಸಾಧ್ಯತೆ ಇದ್ದಲ್ಲಿ ''' (ಚಲನಚಿತ್ರ)''' ಎಂದು ಸೇರಿಸಬೇಕು.
ಉದಾಹರಣೆ: ಧೂಮಕೇತು (ಚಲನಚಿತ್ರ), ರಣಧೀರ ಕಂಠೀರವ (ಚಲನಚಿತ್ರ), ಇಮ್ಮಡಿ ಪುಲಿಕೇಶಿ (ಚಲನಚಿತ್ರ), ಕಿತ್ತೂರು ಚೆನ್ನಮ್ಮ (ಚಲನಚಿತ್ರ), ಚದುರಂಗ (ಚಲನಚಿತ್ರ), ಉಪೇಂದ್ರ (ಚಲನಚಿತ್ರ) ಇತ್ಯಾದಿ.
''(ಚಲನಚಿತ್ರ)'' ಎಂದು ಸೇರಿಸದೆ ಇರುವ ಲೇಖನಗಳು, ಆಯಾ ವಸ್ತು, ವ್ಯಕ್ತಿ, ವಿಷಯಗಳ ಬಗ್ಗೆಯಾದ್ದಾಗಿರುತ್ತದೆ. ಮೇಲ್ಕಾಣಿಸಿದ ಲೇಖನಗಳ ಹೆಸರುಗಳು (ಚಲನಚಿತ್ರ) ಎಂದು ಸೇರಿಸದೆ ಇದ್ದಾಗ ಈ ಕೆಳಕಂಡ ಲೇಖನಗಳಾಗಿರುತ್ತವೆ:
ಧೂಮಕೇತು -> ಬಾಹ್ಯಾಕಾಶ ವಸ್ತುವಿನ ಬಗ್ಗೆ
ರಣಧೀರ ಕಂಠೀರವ -> ಕನ್ನಡದ ಅರಸನ ಬಗ್ಗೆ
ಇಮ್ಮಡಿ ಪುಲಿಕೇಶಿ -> ಚಾಲುಕ್ಯರ ದೊರೆ ಎರಡನೆ ಪುಲಿಕೇಶಿಯ ಬಗ್ಗೆ
ಕಿತ್ತೂರು ಚೆನ್ನಮ್ಮ -> ಕಿತ್ತೂರಿನ ವೀರವನಿತೆ, ಮಲ್ಲಸರ್ಜನ ಹೆಂಡತಿ, ಚೆನ್ನಮ್ಮ ಅವರ ಬಗ್ಗೆ
ಚದುರಂಗ -> ಸಾಹಿತಿ ಚದುರಂಗ ಅವರ ಬಗ್ಗೆ.
ಚದುರಂಗ (ಆಟ) -> ಚದುರಂಗದ ಆಟದ ಬಗ್ಗೆ (chess)
ಉಪೇಂದ್ರ -> ನಟ, ನಿರ್ದೇಶಕ, ಉಪೇಂದ್ರ ಅವರ ಬಗ್ಗೆ
ಉಳಿದ ಚಿತ್ರಗಳಿಗೆ, ''' (ಚಲನಚಿತ್ರ)''' ಎಂದು ಹಾಕುವ ಅವಶ್ಯಕತೆಯಿರುವುದಿಲ್ಲ, ಅಲ್ಲವೆ?
ಉದಾಹರಣೆ: ನಂಜುಂಡಿ ಕಲ್ಯಾಣ, ಗೋವಾದಲ್ಲಿ ಸಿ.ಐ.ಡಿ. ೯೯೯, ನಕ್ಕರೆ ಅದೇ ಸ್ವರ್ಗ, ಅವಳೇ ನನ್ನ ಹೆಂಡತಿ, ಕುಂಕುಮ ತಂದ ಭಾಗ್ಯ, ಬಲು ಅಪರೂಪ ನಮ್ಮ ಜೋಡಿ, ಸೋತು ಗೆದ್ದವಳು, ಕಿಟ್ಟು ಪುಟ್ಟು ಮುಂತಾದ ಪುಟಗಳನ್ನು ಅದೇ ಹೆಸರಿನಲ್ಲಿಡಬಹುದೆಂದು ನನ್ನ ಅಭಿಪ್ರಾಯ.
ಈ ಹೆಸರುಗಳಲ್ಲಿ ಬೇರಾವುದೇ ಲೇಖನಗಳು ಬರಲು ಸಾಧ್ಯತೆಗಳು ಅತ್ಯಂತ ಕಡಿಮೆ ಅಥವಾ ಇಲ್ಲವೇ ಇಲ್ಲ. ಹಾಗೆ ಬಂದರೂ ಆಗ ದ್ವಂದ್ವನಿವಾರಣೆ(disambiguation) ತಂತ್ರವನ್ನು ಅನುಸರಿಸಬಹುದು.
ಈ ವಿಚಾರದಲ್ಲಿ ನಿಮ್ಮೆಲ್ಲರ ಅಭಿಪ್ರಾಯದ ಅವಶ್ಯಕತೆ ಇದೆ. ದಯವಿಟ್ಟು ತಿಳಿಸಿರಿ.
ಧನ್ಯವಾದಗಳು,
- ಮನ
ಕ್ಷಮಿಸಿ. ಹಿಂದಿನ ಮೈಲ್ ನಲ್ಲಿ ಕಳಿಸಿದ್ದ ಲಿಂಕ್ ತಪ್ಪಾಗಿತ್ತು. ಈಗ ಸರಿಯಾದ ಲಿಂಕ್
ಕಳಿಸುತ್ತಿದ್ದೇನೆ.
----
ಸರಿ. mailing-listನಲ್ಲಿ ನಡೆದಿರುವ ಈ ಚರ್ಚೆಯಲ್ಲಿ ನಾನು ಮಂಡಿಸಿದ ಅಭಿಪ್ರಾಯಗಳನ್ನು
ವಿಕಿಪೀಡಿಯ:ಅರಳಿಕಟ್ಟೆ ಪುಟಕ್ಕೆ ಸೇರಿಸಿದ್ದೇನೆ.
http://kn.wikipedia.org/wiki/<http://kn.wikipedia.org/wiki/%20%E0%B2%B5%E0%B2%BF%E0%B2%95%E0%B2%BF%E0%B2%…>ವಿಕಿಪೀಡಿಯ:ಅರಳಿ
ಕಟ್ಟೆ<http://kn.wikipedia.org/wiki/%20%E0%B2%B5%E0%B2%BF%E0%B2%95%E0%B2%BF%E0%B2%…>
ಚರ್ಚೆಯು ಅಲ್ಲಿ ಮುಂದುವರೆಯಲಿ.
ಧನ್ಯವಾದಗಳು,
- ಮನ
On 8/26/06, H P Nadig <hpnadig(a)gmail.com> wrote:
> On Sat, 2006-08-26 at 16:50 -0500, K.N. Manohar wrote:
>
>
> > namespace ಪ್ರಸ್ತಾವನೆ ಬರುವುದು, ಪ್ರತಿಯೊಂದು ಚಲನಚಿತ್ರ ಲೇಖನಕ್ಕೂ, ಅದು
> > ಚಲನಚಿತ್ರದ ಬಗ್ಗೆಯ ಲೇಖನ ಎಂದು ಶೀರ್ಷಿಕೆಯಲ್ಲಿಯೇ ತಿಳಿಯಬೇಕು ಎಂದಾದಲ್ಲಿ ಮಾತ್ರ.
> > ಇದನ್ನು ಕಾರ್ಯನೀತಿ ಪುಟದಲ್ಲಿ ನಡೆದ ಚರ್ಚೆಯಲ್ಲಿಯೂ ಬರೆದಿದ್ದೆ.
>
> ನಿಮ್ಮ ಪ್ರಕಾರ ಅದು ಯಾವಾಗ ಬರುತ್ತದೋ ನನಗೆ ತಿಳಿದಿಲ್ಲ ಸ್ವಾಮಿ. ನೀವು "ಚಲನಚಿತ್ರ"
> ಪುಟಗಳಿಗೆ ಹೊಸ namespace ಬೇಕು ಎಂದು ಬರೆದದ್ದಕ್ಕೆ ಉತ್ತರವಾಗಿ "ಮೇಯ್ಲಿಂಗ್
> ಲಿಸ್ಟಿನಲ್ಲಿ ಚರ್ಚಿಸೋಣ" ಎಂದೆ. ಕಾರ್ಯನೀತಿಯೊಂದನ್ನು ಇಲ್ಲಿ ಚರ್ಚಿಸೋಣವೆಂದು
> ಹೇಳಲಿಲ್ಲ.
>
> ನಾವೀಗ ಚರ್ಚಿಸುತ್ತಿರುವ ಶೀರ್ಷಿಕೆಯೊಂದಿಗೆ "ಚಲನಚಿತ್ರ" ಸೇರಿಸಬೇಕೋ ಬೇಡವೋ ಎಂಬುವ
> ವಿಷಯ ನ್ಯಾಯವಾಗಿ ವಿಕಿಪೀಡಿಯದ ಕಾರ್ಯನೀತಿ ಪುಟದಲ್ಲಿಯೇ ನಡೆಯಬೇಕು. ನಡೆದ ಚರ್ಚೆ ಒಂದೇ
> ಕಡೆ ಆರ್ಕೈವಿನಲ್ಲಿ ಲಭ್ಯವಿದ್ದಲ್ಲಿ ಒಳಿತು.
>
> > ಆದುದರಿಂದ ಮೊದಲು: ಎಲ್ಲಾ ಚಲನಚಿತ್ರ ಲೇಖನಗಳ ಶೀರ್ಷಿಕೆಯಲ್ಲಿಯೇ 'ಚಲನಚಿತ್ರ' ಎಂದು
> > ಬರೆಯುವ ವಿಚಾರವು ಇತ್ಯರ್ಥವಾಗಬೇಕಿದೆ. ಎಲ್ಲ ಪುಟಗಳಿಗೂ ಆ ರೀತಿ ಬದಲಾಯಿಸುವ
> > ಅವಶ್ಯಕತೆಯಿಲ್ಲ ಎಂದಾದರೆ, ಪ್ರತ್ಯೇಕ namespace ಪ್ರಶ್ನೆಯೆ ಉದ್ಭವಿಸುವುದಿಲ್ಲ.
>
> ಇದನ್ನು "ಇತ್ಯರ್ಥ" ಮಾಡಬೇಕಾಗಿರುವುದು ಕಾರ್ಯನೀತಿ ಪುಟದಲ್ಲಿ. ಮುಂದಿನ ಉತ್ತರ ನಾನು
> ಮೇಯ್ಲಿಂಗ್ ಲಿಸ್ಟಿನಲ್ಲಿ ನೀಡುವುದಿಲ್ಲ. ಈ ಚರ್ಚೆಯನ್ನು ಅಲ್ಲಿಗೇ ವರ್ಗಾಯಿಸಿ.
>
> > ಇಲ್ಲಿ ಯಾವುದು consistency ಎಂಬ ಪ್ರಶ್ನೆ ಏಳುತ್ತದೆ. ಎಲ್ಲಾ ಸಾಹಿತಿಗಳ
> > ಪುಟದಲ್ಲಿ (ಸಾಹಿತಿ) ಎಂದು, ಎಲ್ಲಾ ಕ್ರೀಡಾಪಟು ಲೇಖನದ ಹೆಸರಿನಲ್ಲಿ
> > (ಕ್ರೀಡಾಪಟು) ಎಂದು, ಎಲ್ಲಾ ರಾಜಕಾರಣಿಗಳ ಲೇಖನಗಳ ಹೆಸರಿನಲ್ಲಿ (ರಾಜಕಾರಣಿ)
>
> ಈಗಾಗಲೇ ಹಲವು ಚಲನಚಿತ್ರ ಪುಟಗಳಿಗೆ ಬೇರೊಂದು ವಿಷಯದ ಹೆಸರಿರುರುವುದೆಂದು (ಉದಾ:
> "ಚದುರಂಗ") ನಾವು *ಈಗಾಗಲೇ* ಶೀರ್ಷಿಕೆಯೊಂದಿಗೆ "(ಚಲನಚಿತ್ರ)" ಎಂಬುದನ್ನು
> ಸೇರಿಸುತ್ತಿಲ್ಲವೆ? ಆದ್ದರಿಂದ ಶೀರ್ಷಿಕೆಯಲ್ಲಿ "(ಚಲನಚಿತ್ರ)" ಎಂಬುದನ್ನು ಸೇರಿಸುವ
> ಮಟ್ಟಿಗೆ ನಾವುಗಳು ಒಪ್ಪಿಕೊಂಡಾಗಿದೆ.
> ಈಗ ಅದನ್ನು ಎಲ್ಲ ಚಲನಚಿತ್ರ ಪುಟಗಳಿಗೆ ಸೇರಿಸಿದಲ್ಲಿ 'ಯಾವುದಕ್ಕೆ ಸೇರಿಸಬೇಕು
> ಯಾವುದಕ್ಕೆ ಸೇರಿಸಬಾರದು' ಎಂಬುದರ ಬಗ್ಗೆ ಸದಸ್ಯರಿಗೆ
> ತಲೆಕೆಡಿಸಿಕೊಳ್ಳಬೇಕಾಗುವುದಿಲ್ಲ. consistencyಯೂ ಹೆಚ್ಚುತ್ತದೆ.
>
> > ಎಂದು, ಎಲ್ಲಾ ದೇಶಗಳ ಲೇಖನದ ಹೆಸರಿನಲ್ಲಿ (ದೇಶ) ಎಂದು, ಇತ್ಯಾದಿಯಾಗಿ ಸೇರಿಸುವ
> > ಯೋಜನೆಯಿದ್ದಲ್ಲಿ, ಎಲ್ಲಾ ಚಲನಚಿತ್ರಗಳಿಗೂ (ಚಲನಚಿತ್ರ) ಎಂದು ಹಾಕಬಹುದು. ಆಗ
> > consistency ಇರುತ್ತದೆ.
>
> ನೀವು ಬಹುಶಃ ಒಂದು ಅಂಶ ಮರೆಯುತ್ತಿದ್ದೀರಿ. ಕೇವಲ ೩೦೦೦+ ಲೇಖನಗಳಿರುವ ಕನ್ನಡ
> ವಿಕಿಪೀಡಿಯದಲ್ಲಿ ೧೫೦೦ಕ್ಕೂ ಹೆಚ್ಚು "ಚಲನಚಿತ್ರ" ಕುರಿತ stubಗಳೇ ಇವೆ! (ಚುಟುಕು
> ಲೇಖನಗಳು).
> ಈ ಚುಟುಕು ಲೇಖನಗಳಲ್ಲಿ ಬರಿಯ ಶೀರ್ಷಿಕೆಯೊಂದನ್ನು ಸೇರಿಸಿ ಅದರೊಂದಿಗೆ infobox
> ಒಂದನ್ನು ಸೇರಿಸಿ ಬಿಟ್ಟುಬಿಡಲಾಗಿದೆ. ಕೇವಲ ೩೦೦೦ ಲೇಖನಗಳಿರುವ ವಿಕಿಯೊಂದರಲ್ಲಿ
> ಇಷ್ಟೊಂದು ಚಲನಚಿತ್ರ stubಗಳು ಈ ರೀತಿ ಸೇರ್ಪಡೆಯಾಗುತ್ತಿರುವುದು ಬಹುಶಃ ಕನ್ನಡ
> ವಿಕಿಯೊಂದರಲ್ಲೆ. ಅಂತಹ ಪುಟಗಳಲ್ಲಿ "ಇದೊಂದು ಚಲನಚಿತ್ರ" ಎಂಬ ಒಂದು ವಾಕ್ಯ ಕೂಡ
> ಇಲ್ಲ!
>
> random ಲೇಖನ ಲಿಂಕ್ ಕ್ಲಿಕ್ಕಿಸಿದರೆ ಐದರಲ್ಲಿ ನಾಲ್ಕು ಬಾರಿ ಇದೇ ಚಲನಚಿತ್ರದ
> stubಗಳು ಓದಲು ಸಿಗುತ್ತವೆ. ಚಲನಚಿತ್ರಗಳ ಹೆಸರುಗಳು ಸಂಸ್ಕೃತಿಯ ಹಲವು ಕೋನಗಳಿಂದ
> ಬಂದಿರುತ್ತವೆ. ಓದುಗರಿಗೆ ದಿಢೀರನೆ
>
> "ಮನೇಲಿ ರಾಮಣ್ಣ ಬೀದೀಲಿ ಕಾಮಣ್ಣ"
> "ಅಳಿಯ ಮನೆ ತೊಳಿಯ"
> "ಎಕ್ಸ್ ಕ್ಯೂಸ್ ಮಿ"
>
> ಎಂದೆಲ್ಲ ಪುಟಗಳು ಎದುರಾದರೆ ವಿಕಿಪೀಡಿಯದಲ್ಲಿ ಓದುಗರ ಅಚ್ಚರಿ ನೀವೇ ಊಹಿಸಿಕೊಳ್ಳಿ.
> ವಿಕಿಪೀಡಿಯ ಮಾಹಿತಿಯ ಭಂಡಾರವಾಗಬೇಕಾದ ಪ್ರಾಜೆಕ್ಟು. ಇಲ್ಲಿ ವಿಶ್ವಕೋಶವೊಂದನ್ನು ಓದಿದ
> ಅಥವ ಅದರ ಹತ್ತಿರದ ಅನುಭವ ಓದುಗರಿಗಾಗಬೇಕು.
>
> >
> --
> http://hpnadig.net/blog/
>
> "Creativity requires the courage to let go of certainties." ~ Erich
> Fromm
>
> _______________________________________________
> Wikikn-l mailing list
> Wikikn-l(a)Wikipedia.org
> http://mail.wikipedia.org/mailman/listinfo/wikikn-l
>
The following text is in Kannada unicode. If you are not able to see it
properly, please refer to this page:
http://kn.wikipedia.org/wiki/Wikipedia:Kannada_Support
====================
ಗೆಳೆಯರೆ,
ಎಲ್ಲರಿಗೂ ಗೌರಿ ಮತ್ತು ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು!
ವಿವಿಧ ಕನ್ನಡ ಚಲನಚಿತ್ರಗಳ ಬಹಳಷ್ಟು ಲೇಖನಗಳು ವಿಕಿಪೀಡಿಯದಲ್ಲಿ ಸ್ಥಾಪನೆಯಾಗಿವೆ.
ಲೇಖನದ ಹೆಸರಿನಲ್ಲಿ '(ಚಲನಚಿತ್ರ)' ಎಂದು ಸೇರಿಸಬೇಕೆ? ಬೇಡವೆ? ಸೇರಿಸಬೇಕೆಂದಿದ್ದರೆ
ಯಾವಾಗ ಸೇರಿಸಬೇಕು? ಯಾವಾಗ ಸೇರಿಸುವ ಅವಶ್ಯಕತೆಯಿಲ್ಲ? ಎಂಬುದು ಚರ್ಚೆಯಾಗಬೇಕಿದೆ.
ಇದರ ಬಗ್ಗೆ ಅರಳಿಕಟ್ಟೆಯಲ್ಲಿ ಚರ್ಚೆ ಪ್ರಾರಂಭವಾಗಿ, ಕೊನೆಗೆ ಈ mailing-listನಲ್ಲಿ
ಚರ್ಚೆಯಾಗಲಿ, ಇತರರ ಅಭಿಪ್ರಾಯವೂ ಧ್ವನಿಗೂಡಲಿ ಎಂದು ನಿರ್ಧಾರವಾಯಿತು. ಅದರ ಫಲವೇ, ಈ ಅಂಚೆ.
ನನ್ನ ಅಭಿಪ್ರಾಯ ಹೀಗಿದೆ:
ಚಲನಚಿತ್ರಗಳ ಹೆಸರು ವ್ಯಕ್ತಿ, ಊರು, ವಿಷಯ/ವಸ್ತುವಿನ ಹೆಸರಾಗಿದ್ದು, ಆ ಹೆಸರಿನ ಲೇಖನ
ವಿಕಿಪೀಡಿಯದಲ್ಲಿ ಬರುವ ಸಾಧ್ಯತೆ ಇದ್ದಲ್ಲಿ ''' (ಚಲನಚಿತ್ರ)''' ಎಂದು ಸೇರಿಸಬೇಕು.
ಉದಾಹರಣೆ: ಧೂಮಕೇತು (ಚಲನಚಿತ್ರ), ರಣಧೀರ ಕಂಠೀರವ (ಚಲನಚಿತ್ರ), ಇಮ್ಮಡಿ ಪುಲಿಕೇಶಿ
(ಚಲನಚಿತ್ರ), ಕಿತ್ತೂರು ಚೆನ್ನಮ್ಮ (ಚಲನಚಿತ್ರ), ಚದುರಂಗ (ಚಲನಚಿತ್ರ), ಉಪೇಂದ್ರ
(ಚಲನಚಿತ್ರ) ಇತ್ಯಾದಿ.
''(ಚಲನಚಿತ್ರ)'' ಎಂದು ಸೇರಿಸದೆ ಇರುವ ಲೇಖನಗಳು, ಆಯಾ ವಸ್ತು, ವ್ಯಕ್ತಿ, ವಿಷಯಗಳ
ಬಗ್ಗೆಯಾದ್ದಾಗಿರುತ್ತದೆ. ಮೇಲ್ಕಾಣಿಸಿದ ಲೇಖನಗಳ ಹೆಸರುಗಳು (ಚಲನಚಿತ್ರ) ಎಂದು ಸೇರಿಸದೆ
ಇದ್ದಾಗ ಈ ಕೆಳಕಂಡ ಲೇಖನಗಳಾಗಿರುತ್ತವೆ:
ಧೂಮಕೇತು -> ಬಾಹ್ಯಾಕಾಶ ವಸ್ತುವಿನ ಬಗ್ಗೆ
ರಣಧೀರ ಕಂಠೀರವ -> ಕನ್ನಡದ ಅರಸನ ಬಗ್ಗೆ
ಇಮ್ಮಡಿ ಪುಲಿಕೇಶಿ -> ಚಾಲುಕ್ಯರ ದೊರೆ ಎರಡನೆ ಪುಲಿಕೇಶಿಯ ಬಗ್ಗೆ
ಕಿತ್ತೂರು ಚೆನ್ನಮ್ಮ -> ಕಿತ್ತೂರಿನ ವೀರವನಿತೆ, ಮಲ್ಲಸರ್ಜನ ಹೆಂಡತಿ, ಚೆನ್ನಮ್ಮ ಅವರ
ಬಗ್ಗೆ
ಚದುರಂಗ -> ಸಾಹಿತಿ ಚದುರಂಗ ಅವರ ಬಗ್ಗೆ.
ಚದುರಂಗ (ಆಟ) -> ಚದುರಂಗದ ಆಟದ ಬಗ್ಗೆ (chess)
ಉಪೇಂದ್ರ -> ನಟ, ನಿರ್ದೇಶಕ, ಉಪೇಂದ್ರ ಅವರ ಬಗ್ಗೆ
ಉಳಿದ ಚಿತ್ರಗಳಿಗೆ, ''' (ಚಲನಚಿತ್ರ)''' ಎಂದು ಹಾಕುವ ಅವಶ್ಯಕತೆಯಿರುವುದಿಲ್ಲ, ಅಲ್ಲವೆ?
ಉದಾಹರಣೆ: ನಂಜುಂಡಿ ಕಲ್ಯಾಣ, ಗೋವಾದಲ್ಲಿ ಸಿ.ಐ.ಡಿ. ೯೯೯, ನಕ್ಕರೆ ಅದೇ ಸ್ವರ್ಗ, ಅವಳೇ
ನನ್ನ ಹೆಂಡತಿ, ಕುಂಕುಮ ತಂದ ಭಾಗ್ಯ, ಬಲು ಅಪರೂಪ ನಮ್ಮ ಜೋಡಿ, ಸೋತು ಗೆದ್ದವಳು, ಕಿಟ್ಟು
ಪುಟ್ಟು ಮುಂತಾದ ಪುಟಗಳನ್ನು ಅದೇ ಹೆಸರಿನಲ್ಲಿಡಬಹುದೆಂದು ನನ್ನ ಅಭಿಪ್ರಾಯ.
ಈ ಹೆಸರುಗಳಲ್ಲಿ ಬೇರಾವುದೇ ಲೇಖನಗಳು ಬರಲು ಸಾಧ್ಯತೆಗಳು ಅತ್ಯಂತ ಕಡಿಮೆ ಅಥವಾ ಇಲ್ಲವೇ
ಇಲ್ಲ. ಹಾಗೆ ಬಂದರೂ ಆಗ ದ್ವಂದ್ವನಿವಾರಣೆ(disambiguation) ತಂತ್ರವನ್ನು ಅನುಸರಿಸಬಹುದು.
ಈ ವಿಚಾರದಲ್ಲಿ ನಿಮ್ಮೆಲ್ಲರ ಅಭಿಪ್ರಾಯದ ಅವಶ್ಯಕತೆ ಇದೆ. ದಯವಿಟ್ಟು ತಿಳಿಸಿರಿ.
ಧನ್ಯವಾದಗಳು,
- ಮನ
Activity on Kannada Wikipedia has been at its best for last few weeks
and we've seen good amount of interest and participation by community
members as we translate some important articles from English wiki.
At this point of time, we should try and accelerate as much as possible
- try and get as much publicity among netizens as we can. Fellow
bloggers could help out by:
1) mentioning Kannada Wikipedia in their blog posts.
2) adding links to Wikipedia on their blogs.
3) referring to Kannada Wikipedia articles when mentioning names on
their blogs as and when possible.
4) adding RSS feeds of recent changes on Kannada Wikipedia (for an
example, see my website - http://hpnadig.net/blog)
If you write or own a blog, you know what to do :)
Others could help spread the word. :)
Please pass this on to all Kannada friends who blog. We might end up
with very good results if we can push this.
- h.p.
ಸ್ನೇಹಿತರೆ,
ಎಲ್ಲರಿಗೂ ನಮಸ್ಕಾರ. ಇತ್ತೀಚೆಗೆ ವಿಕಿಪೀಡಿಯ ಸಾಕಷ್ಟು ಕ್ಷಿಪ್ರ ಗತಿಯಲ್ಲಿ
ಬೆಳೆಯುತ್ತಿದೆ. ಆದರೆ ಈ ಬೆಳವಣಿಗೆ ಹೆಚ್ಚಿನ ಜನರಿಗೆ ತಿಳಿಯತಲುಪಬೇಕೆಂಬುದಿದ್ದಲ್ಲಿ
ನಾವುಗಳು Interwiki ಸಂಪರ್ಕಗಳನ್ನು ಹೆಚ್ಚಾಗಿ ಸಂಪಾದನೆ ಮಾಡುವಾಗ ಬಳಸುವ ಅವಶ್ಯಕತೆ
ಇದೆ. ಈ Interwiki links ಬಗ್ಗೆ ಎಲ್ಲರ ಗಮನ ಸೆಳೆಯಲು ಈ ಪತ್ರ.
ಇಂಟರ್ ವಿಕಿ ಸಂಪರ್ಕಗಳನ್ನು ಬಳಸಿ ಉಳಿದ ಭಾಷೆಗಳ ವಿಕಿಪೀಡಿಯಗಳ ಪುಟಗಳಲ್ಲಿ ಆಯಾ
ಶೀರ್ಷಿಕೆಗೆ ಕನ್ನಡ ಪುಟವೂ ಇದ್ದರೆ, ಅಲ್ಲೊಂದು ಕನ್ನಡ ಪುಟಕ್ಕೆ ಸಂಪರ್ಕ
ಸೇರಿಸಬಹುದು.
ಅಥವ,
ಕನ್ನಡ ವಿಕಿಯಲ್ಲೆ ಬರೇ ಆಂಗ್ಲ ಭಾಷೆಯಲ್ಲಿರುವ ಪುಟಕ್ಕೆ ಇಂಟರ್ ವಿಕಿ ಸೇರಿಸಿದರೂ
ಆಯಿತು. ವಾರದಾದ್ಯಂತ ಹಲವು Botಗಳು ಕನ್ನಡ ವಿಕಿಪೀಡಿಯದ ಮೇಲೆ
ಕಾರ್ಯನಿರ್ವಹಿಸುತ್ತಿರುತ್ತವಾದ್ದರಿಂದ ಆಂಗ್ಲ ಭಾಷೆಯ ವಿಕಿಯಲ್ಲಿರುವ ಉಳಿದ ಭಾಷೆಯ
Interwiki ಸಂಪರ್ಕಗಳನ್ನು ತಂತಾನಾಗಿಯೇ ಸೇರಿಸಿಬಿಡುತ್ತವೆ.
Interwiki link ಒಂದನ್ನು ಸೇರಿಸುವುದಕ್ಕೊಂದು ಉದಾಹರಣೆ:
[[en:Kannada]] - ಎಂಬ "ಕನ್ನಡ" ಎಂಬ ಶೀರ್ಷಿಕೆಯ ಪುಟದಲ್ಲಿ ಸೇರಿಸಿದರೆ ಆ ಪುಟದ
ಎಡ ಭಾಗದ ಮೆನ್ಯುನಲ್ಲಿ "English" ಎಂಬ ಸಂಪರ್ಕ ಮೂಡುತ್ತದೆ.
ಹೀಗೆಯೇ ಆಂಗ್ಲ ಪುಟದ "Kannada" ಶೀರ್ಷಿಕೆಯ ಪುಟದಲ್ಲಿ:
[[kn:ಕನ್ನಡ]] ಎಂದು ಸೇರಿಸಿದರೆ ಅಲ್ಲಿ ಮೇಲಿನಂತೆ ಆದರೆ ಕನ್ನಡ ವಿಕಿಪೀಡಿಯದ ಪುಟಕ್ಕೆ
ಸಂಪರ್ಕ ಸೇರ್ಪಡೆಯಾಗುತ್ತದೆ.
ಒಟ್ಟಾರೆ, ಆಂಗ್ಲ ವಿಕಿಯಲ್ಲಿರುವ ಪುಟಗಳಲ್ಲಿ ಆಯಾ ಕನ್ನಡ ಪುಟಗಳಿಗೆ ಒಂದೊಂದು ಸಂಪರ್ಕ
ಕಲ್ಪಿಸಿಬಿಟ್ಟರೆ ಸಾಕು, ಇನ್ನುಳಿದ ಭಾಷೆಗಳ ಜವಾಬ್ದಾರಿ Botಗಳು ವಹಿಸಿಕೊಂಡು ಕೆಲಸ
ಮಾಡುತ್ತವೆ. ಆದ್ದರಿಂದ ಇಂದಿನಿಂದಲೇ ಶುರು ಹಚ್ಚಿಕೊಳ್ಳೋಣ. ಏನಂತೀರಿ? ;-)
ಧನ್ಯವಾದಗಳು,
- ಹರಿ ಪ್ರಸಾದ್ ನಾಡಿಗ್