ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ವಿಕಿಪೀಡಿಯ ದೇಶದ ವಿವಿದೆಡೆಗಳಲ್ಲಿ ಮಹಿಳಾ
ಸಮ್ಮಿಲನಗಳನ್ನು ಹಮ್ಮಿಕೊಂಡಿದೆ.
ಅದರ ಬಗ್ಗೆ ಹೆಚ್ಚಿನ ಮಾಹಿತಿ ಈ ಕೊಂಡಿಯಲ್ಲಿ ಲಭ್ಯ:
Wikipedia:Meetup/International Women's Day,
India<http://en.wikipedia.org/wiki/Wikipedia:Meetup/International_Women%…
ಜೊತೆಗೆ ಬೆಂಗಳೂರಿನಲ್ಲಿಯೂ ಅನೇಕ ಮಹಿಳೆಯರು ಒಂದೆಡೆ ಸೇರಿ ೯, ಮಾರ್ಚ್ ೨೦೧೩ರಂದು
ವಿಕಿಪೀಡಿಯ ಬಗ್ಗೆ ಅರಿತುಕೊಂಡರು. ಜೊತೆಗೆ ವಿಕಿಸಂಪಾದನೆಗೂ ತೊಡಗಿದರು. ಪವಿತ್ರ ಈ
ಸಮ್ಮಿಲನ ನೆಡೆಸಿಕೊಟ್ಟರು.
ಈ ಕಾರ್ಯಕ್ರಮದ ಸಂದರ್ಭದಲ್ಲಿ ಕನ್ನಡದ ಮಹಿಳೆಯರ ಪುಟಗಳನ್ನೂ ಸಂಪಾದಿಸಲು ಸಾಧ್ಯವಾಗಬೇಕು
ಎಂಬ ಆಶಯದಿಂದ ಈ ಕೆಳಗಿನ ಕೊಂಡಿಯನ್ನು ಸಿದ್ದಪಡಿಸಿದ್ದೇವೆ. ಕನ್ನಡ ವಿಕಿಪೀಡಿಯ ಸುತ್ತ
ಕೆಲಸ ಮಾಡುತ್ತಿರುವ ಮಹಿಳೆಯರು ಇದರತ್ತ ಗಮನ ಹರಿಸಬೇಕೆಂದು ಕೋರಿಕೆ.
ವಿಕಿಪೀಡಿಯ:ಸಮ್ಮಿಲನ/ಅಂತರಾಷ್ಟ್ರೀಯ ಮಹಿಳಾ ದಿನೋತ್ಸವ ೨೦೧೩,
ಭಾರತ<http://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E…
* ಕುಮಾರವ್ಯಾಸನ ವ್ಯಾಸ ಭಾರತದ ಪರ್ವಗಳನ್ನು ವಿಕಿಪೀಡಿಯಕ್ಕೆ ಸೇರಿಸುವುದರ ಮೂಲಕ ಸವಿತಾ
ಎಸ್. ಆರ್ ಮಹಿಳಾ ದಿನದ ಆಚರಣೆಯಲ್ಲಿ ತೊಡಗಿದ್ದಾರೆ.
* ಶ್ಯಾಮಲಾ ಜನಾರ್ಧನ್ ಹರಿಕಥಾಮೃತ ಸಾರವನ್ನುವಿಕಿಪೀಡಿಯದ ವಿಕಿಸೋರ್ಸ್ಗೆ ಸೇರಿಸುವ
ಪ್ರಯತ್ನ ಮಾಡುತ್ತಿದ್ದಾರೆ.
* ಸಮ್ಮಿಲನದ ದಿನ ಡಾ. ಸುಮಿತ್ರ ಬೆಂಗಳೂರಿನವರೇ ಆದ ಭಾರತದ ಫಿಷರ್ ವುಮನ್ ಎಂದೇ ಖ್ಯಾತಿ
ಪಡೆದ ನಳಿನಿ ನಾಯಕ್ ಅವರ ಬಗ್ಗೆ ತಿಳಿಸಿ, ಅವರಿಗೆ ಸಂಬಂಧಿಸಿದ ಪುಟದ ಸಂಪಾದನೆಯಲ್ಲಿ
ತೊಡಗಿದರು.
* ಲಕ್ಷ್ಮಿಚೈತನ್ಯ ಅನೇಕ ಸಾಧಕಿಯರ ಪರಿಚಯವನ್ನು ವಿಕಿಪೀಡಿಯ ಮೂಲಕ ಮಾಡಿಕೊಡಲು ಮುಂದೆ
ಬಂದಿದ್ದಾರೆ.
ಈಗ ನಿಮ್ಮ ಸರದಿ, ನಿಮ್ಮ ನೆಚ್ಚಿನ ನಟಿ, ಲೇಖಕಿ, ಕ್ರೀಡಾಪಟು, ಅಥವಾ ನಿಮ್ಮ ಸುತ್ತಲಿನ
ಸಾಧಕಿಯರನ್ನು ವಿಕಿಪೀಡಿಯದ ಮೂಲಕ ಇತರರಿಗೆ ಪರಿಚಯ ಮಾಡಿಕೊಡಿ.
Event Page- Bangalore:
http://wiki.wikimedia.in/Wikipedia_Women%27s_Workshop_Bangalore_2013
--
With Best Regards,
Omshivaprakash.H.L | ಓಂ ಶಿವಪ್ರಕಾಶ್ ಎಚ್. ಎಲ್ | ॐ शिवप्रकाश् एच्. एल्
http://platonic.techfiz.info
http://blog.shivu.in
Phone: 91- 9902026518
linuxaayana.net |
kindarajogi.com |
sanchaya.net