ಸೆಂಟರ್ ಫಾರ್ ಇಂಟರ್ನೆಟ್ ಆಂಡ್ ಸೊಸೈಟಿ (ಸಿಐಎಸ್) ಅವರು ಕನ್ನಡ ಭಾಷೆಗಾಗಿ ಕೆಲಸ ಮಾಡಲು ಪ್ರೋಗ್ರಾಂ ಅಸೋಸಿಯೇಟ್ ಕೆಲಸಕ್ಕೆ ಅರ್ಜಿಗಳನ್ನು ಆಹ್ವಾನಿಸುತ್ತಿದ್ದಾರೆ. ಇವರು ಜೂನ್ ೩೦, ೨೦೧೬ರ ತನಕ ಸಿಐಎಸ್ನ ಅಕ್ಸೆಸ್ ಟು ನಾಲೆಜ್ (ಎ೨ಕೆ) ಕಾರ್ಯಕ್ರಮದಲ್ಲಿ ಕನ್ಸಲ್ಟೆಂಟ್ ಆಗಿ ಕೆಲಸ ಮಾಡಬೇಕಾಗುತ್ತದೆ.
ಈ ಕೆಲಸಕ್ಕೆ ಅರ್ಜಿ ಹಾಕುವ ಮೊದಲು https://meta.wikimedia.org/wiki/CIS-A2K/Work_plan_July_2015_-_June_2016 ಸಿಐಎಸ್-ಎ೨ಕೆ ವಿಕಿಪೀಡಿಯ ಕ್ರಿಯಾಯೋಜನೆ ಜುಲೈ ೨೦೧೫ - ಜೂನ್ ೨೦೧೬ ಅನ್ನು ಓದಿಕೊಳ್ಳುವುದು ಒಳ್ಳೆಯದು. ನೀವು ವಿಕಿಮೀಡಿಯ ಸಮುದಾಯ, https://meta.wikimedia.org/wiki/Wikimedia_India ವಿಕಿಮೀಡಿಯ ಇಂಡಿಯ, https://wikimediafoundation.org/wiki/FAQ/en ವಿಕಿಮೀಡಿಯ ಫೌಂಡೇಶನ್, ಇತರೆ ಸಮಾನಮನಸ್ಕ ಸಂಸ್ಥೆಗಳು ಮತ್ತು ಸಿಐಎಸ್-ಎ೨ಕೆಯ ಭಾಗೇದಾರಿಗಳ ಜೊತೆ ಸೇರಿ ಕನ್ನಡ ವಿಕಿಪೀಡಿಯ ಮತ್ತು ಕನ್ನಡ ವಿಕಿಪೀಡಿಯ ಸಮುದಾಯವನ್ನು ಬೆಳೆಸುವ ಕೆಲಸ ಮಾಡಬೇಕಾಗುತ್ತದೆ. ೪ ರಿಂದ ೮ ಜನರ ಒಂದು ಚಿಕ್ಕ ತಂಡದ ಜೊತೆ ನೀವು ಕೆಲಸ ಮಾಡಬೇಕಾಗುತ್ತದೆ. ಶುದ್ಧ ಪಾರದರ್ಶಕ ನಡೆ ಮತ್ತು ಉತ್ತರದಾಯಿತ್ವಕ್ಕೆ ನೀವು ಸಿದ್ಧರಿರಬೇಕು.
ಜವಾಬ್ದಾರಿಗಳು;
ಪ್ರಮುಖ ಜವಾಬ್ದಾರಿಗಳನ್ನು ಕನ್ನಡ ವಿಕಿಪೀಡಿಯ ಸಮುದಾಯವು ನಿರ್ಣಯಿಸುತ್ತದೆ.
ಸಿಐಎಸ್-ಎ೨ಕೆ ವತಿಯಿಂದ
* ಸಮುದಾಯ ಮತ್ತು ಸಿಐಎಸ್-ಎ೨ಕೆ ನಡುವೆ ಸಂಪರ್ಕ-ಸೇತುವೆಯಂತೆ ಕೆಲಸ ಮಾಡುವುದು (ದತ್ತಿಗಳ ಬೇಡಿಕೆಗಳನ್ನು ವಿಶ್ಲೇಷಿಸುವುದು, ಸಮ್ಮಿಲನ ಮತ್ತು ಇತರೆ ಕಾರ್ಯಕ್ರಮಗಳ ಉಸ್ತುವಾರಿ ಮತ್ತು ಇತರೆ ಕ್ರಿಯಾಯೋಜನೆಗಳ ಉಸ್ತುವಾರಿ) * ತಿಂಗಳ ಯೋಜನಾ ವರದಿ * ತಿಂಗಳ ಐಆರ್ಸಿ ಸಮ್ಮಿಲನ, ಸುದ್ದಿಪತ್ರಿಕೆ, ಸಮ್ಮಿಲನ, ಹಾಗೂ ದಾಖಲೀಕರಣ * ಐಇಜಿ ದತ್ತಿ ಪಡೆದವರ ಜೊತೆ ಕೆಲಸ ಮಾಡುವುದು, ಅವರಿಗೆ ಅಗತ್ಯ ಸಹಾಯ ನೀಡುವುದು, ಐಇಜಿ ಪ್ರಸ್ತಾವನೆ ತಯಾರಿಸುವುದು * ಕನ್ನಡ ವಿಕಿಪೀಡಿಯ ಮತ್ತು ಸಮುದಾಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಗತ್ಯ ಪ್ರಚಾರ ಮತ್ತು ತಾಂತ್ರಿಕ ಬೆಂಬಲ * ಪ್ರತಿ ಮೂರು ತಿಂಗಳುಗಳಿಗೆ ಒಮ್ಮೆ ಕೆಲಸದ ಪ್ರಗತಿಯ ವಿಶ್ಲೇಷಣೆ ನಡೆಸಲಾಗುವುದು * ಸಿಐಎಸ್-ಎ೨ಕೆ ಪ್ರೋಗ್ರಾಮ್ ಡೈರೆಕ್ಟರ್ ಅವರ ನಿರ್ದೇಶನದಂತೆ ಆಗಾಗ ಇತರೆ ಕೆಲಸಗಳನ್ನು ಸೂಚಿಸಲಾಗುವುದು
ಕೆಲಸದ ಸ್ಥಳ
ಬೆಂಗಳೂರು
ಸಂಭಾವನೆ
ಅನುಭವ ಮತ್ತು ಪರಿಣತೆಯನ್ನು ಹೊಂದಿಕೊಂಡು ಸಂಭಾವನೆಯನ್ನು ನಿಗದಿಪಡಿಸಲಾಗುವುದು. ಆಸಕ್ತರು ತಮ್ಮ ರೆಸ್ಯೂಮ್ ಮತ್ತು ತಮಗೆ ಈ ಕೆಲಸದಲ್ಲಿ ಯಾಕೆ ಆಸಕ್ತಿ ಎಂದು ವಿವರಿಸುವ ಪತ್ರ ಜೊತೆ ಇಮೈಲ್ ಮಾಡತಕ್ಕದ್ದು. ಇಮೈಲ್ ಅನ್ನು pavanaja@cis-india.org ವಿಳಾಸಕ್ಕೆ ಕಳುಹಿಸತಕ್ಕದ್ದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಅಕ್ಟೋಬರ್ ೧೫, ೨೦೧೫ ರ ತನಕ ವಿಸ್ತರಿಸಲಾಗಿದೆ
-ಪವನಜ