ಆತ್ಮೀಯ ವಿಕಿಮೀಡಿಯ ಬಂಧುಗಳೇ,
WMIN ಮತ್ತು ಸಿಐಎಸ್-ಏ೨ಕೆ ಒಡಗೂಡಿ ಮೀಡಿಯವಿಕಿ ವಿಕಿ ಟ್ರೇನ್ ದ್ ಟ್ರೇನರ್ ಕಾರ್ಯಕ್ರಮದ ತಯಾರಿಯನ್ನು
ಪ್ರಾರಂಭಿಸಿದ್ದೇವೆ ಎಂದು ತಿಳಿಸಲು ಬಹಳ ಸಂತೋಷವಾಗುತ್ತಿದೆ. ಇಂದು ಭಾರತೀಯ ಭಾಷಾ ವಿಕಿಮೀಡಿಯ
ಪ್ರಾಜೆಕ್ಟ್ಗಳು ನಿಧಾನವಾಗಿಯಾದರು ತಮ್ಮಲ್ಲಿರುವ ವಿಷಯ ಸಂಗ್ರಹಿಸುವ, ಸುಧಾರಿಸುವ ಹಾಗು ಸ್ವಯಂಸೇವಕ ಸಮುದಾಯ
ವಿಸ್ತರಿಸುವ ಕಾರ್ಯದಲ್ಲಿ ಯಶಸ್ಸು ಕಾಣುತ್ತಿವೆ. ಆದರೆ ಇದೇ ಸಂದರ್ಭದಲ್ಲಿ ಗಮನಿಸಬೇಕಾದ ಅಂಶವೆಂದರೆ ಭಾರತೀಯ
ಭಾಷಾ ವಿಕಿಮೀಡಿಯ ಪ್ರಾಜೆಕ್ಟ್ಗಳಲ್ಲಿ ತಾಂತ್ರಿಕ ವಿಷಯಗಳ ಕಡೆಗೆ ವಹಿಸುತ್ತಿರುವ ಆಸಕ್ತಿ ಬಹಳ ಕಡಿಮೆ.
ಈ ಕುರಿತು ಕನ್ನಡದ ವಿಕಿಮೀಡಿಯ ಬಂಧುಗಳಲ್ಲಿ ಆಸಕ್ತಿ ಮೂಡಿಸಲು ಹಾಗು ಈ ದಿಶೆಯಲ್ಲಿ ಹೆಚ್ಚು ಕೆಲಸ ಮಾಡುವಂತೆ
ಪ್ರೇರೇಪಿಸಲು WMIN ಮತ್ತು ಸಿಐಎಸ್-ಏ೨ಕೆ ಒಡಗೂಡಿ ಮೀಡಿಯವಿಕಿ ವಿಕಿ ಟ್ರೇನ್ ದ್ ಟ್ರೇನರ್ ಕಾರ್ಯಕ್ರಮವನ್ನು
ಆಯೋಜಿಸುತ್ತಿದ್ದೇವೆ. ಈ ಕಾರ್ಯಗಾರದಲ್ಲಿ ತಾಂತ್ರಿಕ ಸಮಸ್ಯೆಗಳು, ಅದನ್ನು ಪರಿಹರಿಸುವ ಬಗೆ, ಕನ್ನಡ
ವಿಕಿಮೀಡಿಯ ಪ್ರಾಜೆಕ್ಟ್ಗಳಲ್ಲಿ ಕಂಡು ಬರುವ ಲೋಪಗಳನ್ನು ನಿರ್ವಹಿಸುವ ಕುರಿತು ಮಾಹಿತಿ ವಿನಿಮಯ ಮತ್ತು
ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ತಾಂತ್ರಿಕ ಪರಿಣಿತಿ ಮತ್ತು ಅದನ್ನು ಎಲ್ಲಾ
ವಿಕಿಮೀಡಿಯ ಬಂಧುಗಳಿಗೆ ಉಪಯೋಗವಾಗುವಂತೆ ಬಳಸುವ ವಿಧಾನದ ಕುರಿತು ತರಬೇತಿ ನೀಡಲಾಗುವುದು. ಈ ತರಬೇತಿ
ಕಾರ್ಯಗಾರವನ್ನು ಜೂನ್ ತಿಂಗಳ ಅಂತ್ಯದಲ್ಲಿ ಬೆಂಗಳೂರಿನಲ್ಲಿ ಆಯೋಜಿಸುವ ಆಲೋಚನೆಯಿದೆ.
ಈ ಕಾರ್ಯಕ್ರಮದ ಕುರಿತು ಸಲಹೆ ಮತ್ತು ಸೂಚನೆಗಳಿದ್ದಲ್ಲಿ ದಯವಿಟ್ಟು ನಮ್ಮನ್ನು ಸಂಪರ್ಕಿಸಬೇಕಾಗಿ ವಿನಂತಿ
ಮೀಡಿಯವಿಕಿ ವಿಕಿ ಟ್ರೇನ್ ದ್ ಟ್ರೇನರ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಇಚ್ಛೆಯಿರುವ ವಿಕಿಮೀಡಿಯ ಬಂಧುಗಳು
ತಮ್ಮ ಹೆಸರನ್ನು ಈ ಪುಟದಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗಿ ವಿನಂತಿ -
https://meta.wikimedia.org/wiki/CIS-A2K/Events/Mediawiki_Train_the_Trainer_…
ಇತಿ,
ಪವನಜ