ನಮಸ್ಕಾರ, ಮತ್ತೊಮ್ಮೆ, ಎಲ್ಲರಿಗೂ...
ಕೊನೆಯ ಒಂದು ವಾರದಲ್ಲಿ ನೀವು ಗಮನಿಸಿರುವಂತೆ ವಿಶ್ವಕೋಶಕ್ಕೆ ಸಾಕಷ್ಟು ಬದಲಾವಣೆಗಳಾಗಿವೆ. ಕಳೆದೆರಡು ದಿನಗಳಲ್ಲಿ ನಡೆದ ಪ್ರಮುಖ ಬದಲಾವಣೆಗಳನ್ನು ಇಲ್ಲಿ ನಿಮ್ಮ ಮುಂದಿಡಲು ಬಯಸುತ್ತೇನೆ:
* ವಿಶ್ವಕೋಶದಲ್ಲಿ ಈಗ ಜಾವಸ್ಕ್ರಿಪ್ಟ್ ಬಳಕೆಯ ಕೀಲಿ ಮಣೆ ಲಭ್ಯ. ಟೈಪಿಂಗ್ ಮಾಡಿದಷ್ಟು ಸುಲಭವಾಗದಿದ್ದರೂ, ಹೊಸಬರಿಗೆ ಇದು ಉಪಯುಕ್ತವಾಗಬಹುದು. * ಮಾನ್ಯ ಪವನಜರವರ ಸಹಾಯದಿಂದ ಹಲವು ಸಾಹಿತಿಗಳ ಬಗೆಗಿನ ಅತ್ಯುತ್ತಮ ಲೇಖನಗಳು ಇಂದು ವಿಕಿಪೀಡಿಯಾ ಸೇರಿದವು. ಇವರ ಕನ್ನಡ ತಾಣ http://vishvakannada.com/ ನಲ್ಲಿದ್ದ ಹಲವು ಲೇಖನಗಳನ್ನು ವಿಕಿಪೀಡಿಯಾದಲ್ಲಿ ಹಾಕಲು ಅನುವು ಮಾಡಿಕೊಟ್ಟಿದ್ದಾರೆ. * ಸಮುದಾಯ ಪುಟವನ್ನು ಮರುರೂಪಿಸಲಾಗಿದೆ. ಸಮುದಾಯ ಪುಟದ ಬಗ್ಗೆ ಏನಾದರೂ ಸಲಹೆಗಳು ಅಥವಾ ಅಭಿಪ್ರಾಯಗಳಿದ್ದಲ್ಲಿ ಅವುಗಳನ್ನು ಅದರ ಚರ್ಚೆ ಪುಟದಲ್ಲಿ ಬರೆಯಬಹುದು.
---
ನಿಮಗೆಲ್ಲರಿಗೂ ತಿಳಿದಂತೆ ತಿಂಗಳಿಗೆ ಹಲವು ಬಾರಿ ಮುಖ್ಯಪುಟಕ್ಕೆ ವಿಶೇಷ ಬರಹವೊಂದನ್ನು ಆರಿಸಿ ಲಗತ್ತಿಸಲಾಗುತ್ತದೆ. ಈ ಬಾರಿಯ ವಿಶೇಷ ಬರಹಕ್ಕೆ ಎಲ್ಲರ ಅಭಿಪ್ರಾಯವೂ ಬರಬೇಕೆಂದು ನನ್ನ ಆಶಯ. ನಿಮಗಿಷ್ಟವಾದ ಲೇಖನವೊಂದನ್ನು ಆರಿಸಿ ಈ ಪುಟದಲ್ಲಿ ಸಂದೇಶವನ್ನು ಬಿಡಿ: http://kn.wikipedia.org/w/wiki.phtml?title=Wikipedia_talk:%E0%B2%B5%E0%B2%BF... ಬರಹ/ಸಂಚಿಕೆ - ೩&action=edit§ion=new
--- ಕೆಲವು ಉಪಯುಕ್ತ ವಿಕಿ ಸಂಪರ್ಕಗಳು: http://kn.wikipedia.org/w/wiki.phtml?title=Special:Allpages&from=HomePag... - ಕನ್ನಡ ವಿಕಿಪೀಡಿಯಾದಲ್ಲಿರುವ ಎಲ್ಲ ಪುಟಗಳು. http://kn.wikipedia.org/wiki/Special:Imagelist - ಕನ್ನಡ ವಿಕಿಪೀಡಿಯಾದಲ್ಲಿರುವ ಚಿತ್ರಗಳ ಪಟ್ಟಿ.
- ಹರಿ ಪ್ರಸಾದ್ ನಾಡಿಗ್