ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಆ ಪ್ರಯುಕ್ತ ನವೆಂಬರ್ ಮೊದಲನೆಯ ವಾರದಂದು ಕನ್ನಡ-ಕನ್ನಡಿಗ-ಕರ್ನಾಟಕ ಎಂಬ ಪರಿಕಲ್ಪನೆಯಲ್ಲಿ ರಾಜ್ಯದ ಬಗ್ಗೆ ಸಂಪಾದನೋತ್ಸವ ನಡೆಸುವುದು ಎಂದು ಹಿಂದಿನ ಸಮ್ಮಿಲನದಲ್ಲಿ <[http://%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2.... ಈ ಸಂಪಾದನೋತ್ಸವವನ್ನು ಒಂದು ತಿಂಗಳು ಮುಂದುವರಿಸಿ, ಮೊದಲನೆಯ ವಾರದ ಹೊರತಾಗಿ ಇತರ ದಿನಗಳಲ್ಲಿ ಯಾವುದೇ ವಿಷಯಗಳನ್ನು ತೆಗೆದುಕೊಳ್ಳಬಹುದಾಗಿದೆ. ಈ ಸಂಪಾದನೋತ್ಸವದ ಉದ್ದೇಶ ಕನ್ನಡ-ಕರ್ನಾಟಕ- ಕನ್ನಡಿಗ ವಿಷಯಕ್ಕೆ ಸಂಬಂಧಿಸಿದ ವಿಷಯಗಳನ್ನು ಸೇರಿಸುವುದು ಮತ್ತು ಇರುವ ಲೇಖನಗಳನ್ನು ವಿಸ್ತರಿಸುವುದು. ತಾವೆಲ್ಲರೂ ಆಸಕ್ತಿಯಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ವಿನಂತಿ. ಭಾಗವಹಿಸಲು ತಮ್ಮ ಹೆಸರನ್ನು ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿರಿ https://kn.wikipedia.org/s/1rc1.