ಸಂತೋಷ, ತರಬೇತಿ ವಿಷಯ ಅತ್ಯವಶ್ಯವಾಗಿದುದು. ಕಾರ್ಯಾಗಾರ ಸಂಘಟಿಸುತ್ತಿರುವ CIS ಧನ್ಯವಾದಗಳು. ಪಾಲುಪಡೆಯಲು ಪ್ರಯತ್ನಿಸುತ್ತೇನೆ. ಧನ್ಯವಾದಗಳು,
ಭರತೇಶ ಅಲಸಂಡೆಮಜಲು ಪುತ್ತೂರು, ಮಂಗಳೂರು.
Thank you and Best Regards, Bharathesha A B
On ಜುಲೈ 20, 2017, at 06:43 ಅಪರಾಹ್ನ, Vikas Hegde vikashegde82@gmail.com wrote:
ಟೆಂಪ್ಲೇಟುಗಳು ಮತ್ತು ಇನ್ಫೋಬಾಕ್ಸ್ ಗಳು ವಿಕಿಪೀಡಿಯಾದಲ್ಲಿ ಮುಖ್ಯವಾದ, ಅಗತ್ಯವಾದ ಸೌಲಭ್ಯವಾಗಿವೆ. ನಾವು ಸೇರಿಸುವ ಲೇಖನಗಳಿಗೆ ಇವು ಹೆಚ್ಚಿನ ಮೌಲ್ಯ ತರುತ್ತವೆ. ವಿಕಿಸಂಪಾದನೆಯ ಚಟುವಟಿಕೆಗಳಲ್ಲಿ ಸಹಾಯವಾಗುತ್ತವೆ. ಮಾಹಿತಿ ಸಂಗ್ರಹಣೆ, ಅಂತರ್ಜೋಡಣೆಯಲ್ಲಿ ಮುಖ್ಯಪಾತ್ರ ವಹಿಸುತ್ತವೆ. ವಿಕಿಪೀಡಿಯಾ ಸಂಪಾದನೆಯಲ್ಲಿ ಇವುಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಹಾಗಾಗಿ *ಟೆಂಪ್ಲೇಟ್ಸ್, ಇನ್ಫೋಬಾಕ್ಸ್ ಗಳ ತಿಳಿವಳಿಕೆ, ರಚನೆ, ಎಡಿಟಿಂಗ್, ಆಮದು ಇತ್ಯಾದಿಗಳ ಬಗ್ಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಜುಲೈ 30, 2017ರಂದು ಹಮ್ಮಿಕೊಳ್ಳಲಾಗಿದೆ.* ಈ ಕಾರ್ಯಾಗಾರವು Center for Internet & Society https://cis-india.org/ವತಿಯಿಂದ ಬೆಂಗಳೂರಿನ ದೊಮ್ಮಲೂರಿನಲ್ಲಿರುವ CIS ಕಚೇರಿಯಲ್ಲಿ ನಡೆಯಲಿದೆ. ಇದಕ್ಕೆ ವಿಕಿಪೀಡಿಯಾ ಸಂಪಾದನೆಯ ತಿಳುವಳಿಕೆ, ಅನುಭವ ಇರುವ ವಿಕಿಪೀಡಿಯನ್ನರು ಮಾತ್ರ ಅರ್ಹರಾಗಿರುತ್ತಾರೆ. ಆಸಕ್ತರು *ಅರಳಿಕಟ್ಟೆಯಲ್ಲಿ https://kn.wikipedia.org/s/18f* ತಮ್ಮ ಹೆಸರುಗಳನ್ನು ನೊಂದಾಯಿಸಲು ಕೋರಿಕೆ. ಯಾವುದೇ ಶುಲ್ಕ ಇರುವುದಿಲ್ಲ. ಬೇರೆ ಊರುಗಳಿಂದ ಬರುವವರು ಪ್ರಯಾಣ ಭತ್ಯೆ ಪಡೆಯಲು ಅವಕಾಶವಿದೆ.
ದಿನಾಂಕ: 30 ಜುಲೈ 2017, ಭಾನುವಾರ ಸಮಯ: ಬೆಳಗ್ಗೆ 10ರಿಂದ ಸಂಜೆ 5 ಸ್ಥಳ: ಸಿ. ಐ .ಎಸ್. ಕಛೇರಿ, 194, 2nd C Cross Road, 2nd Stage, Domlur, Bengaluru. (ದೊಮ್ಮಲೂರು ಕ್ಲಬ್ ಹತ್ತಿರ) ಸ್ಥಳದ ಗೂಗಲ್ ನಕ್ಷೆ ಕೊಂಡಿ https://goo.gl/maps/9YGhH1LZxZm _______________________________________________ Wikikn-l mailing list Wikikn-l@lists.wikimedia.org https://lists.wikimedia.org/mailman/listinfo/wikikn-l