[Wikikn-l (kannada wikipedia)] Updates

H P Nadig hpnadig at pacific.net.in
Sat Nov 13 21:05:20 UTC 2004


ನಮಸ್ಕಾರ, ಮತ್ತೊಮ್ಮೆ, ಎಲ್ಲರಿಗೂ...

ಕೊನೆಯ ಒಂದು ವಾರದಲ್ಲಿ ನೀವು ಗಮನಿಸಿರುವಂತೆ ವಿಶ್ವಕೋಶಕ್ಕೆ ಸಾಕಷ್ಟು ಬದಲಾವಣೆಗಳಾಗಿವೆ. ಕಳೆದೆರಡು 
ದಿನಗಳಲ್ಲಿ ನಡೆದ ಪ್ರಮುಖ ಬದಲಾವಣೆಗಳನ್ನು ಇಲ್ಲಿ ನಿಮ್ಮ ಮುಂದಿಡಲು ಬಯಸುತ್ತೇನೆ:

* ವಿಶ್ವಕೋಶದಲ್ಲಿ ಈಗ ಜಾವಸ್ಕ್ರಿಪ್ಟ್ ಬಳಕೆಯ ಕೀಲಿ ಮಣೆ ಲಭ್ಯ. ಟೈಪಿಂಗ್ ಮಾಡಿದಷ್ಟು ಸುಲಭವಾಗದಿದ್ದರೂ, 
ಹೊಸಬರಿಗೆ ಇದು ಉಪಯುಕ್ತವಾಗಬಹುದು.
* ಮಾನ್ಯ ಪವನಜರವರ ಸಹಾಯದಿಂದ ಹಲವು ಸಾಹಿತಿಗಳ ಬಗೆಗಿನ ಅತ್ಯುತ್ತಮ ಲೇಖನಗಳು ಇಂದು ವಿಕಿಪೀಡಿಯಾ 
ಸೇರಿದವು. ಇವರ ಕನ್ನಡ ತಾಣ http://vishvakannada.com/ ನಲ್ಲಿದ್ದ ಹಲವು ಲೇಖನಗಳನ್ನು 
ವಿಕಿಪೀಡಿಯಾದಲ್ಲಿ ಹಾಕಲು ಅನುವು ಮಾಡಿಕೊಟ್ಟಿದ್ದಾರೆ.
* ಸಮುದಾಯ ಪುಟವನ್ನು ಮರುರೂಪಿಸಲಾಗಿದೆ. ಸಮುದಾಯ ಪುಟದ ಬಗ್ಗೆ ಏನಾದರೂ ಸಲಹೆಗಳು ಅಥವಾ 
ಅಭಿಪ್ರಾಯಗಳಿದ್ದಲ್ಲಿ ಅವುಗಳನ್ನು ಅದರ ಚರ್ಚೆ ಪುಟದಲ್ಲಿ ಬರೆಯಬಹುದು.

---

ನಿಮಗೆಲ್ಲರಿಗೂ ತಿಳಿದಂತೆ ತಿಂಗಳಿಗೆ ಹಲವು ಬಾರಿ ಮುಖ್ಯಪುಟಕ್ಕೆ ವಿಶೇಷ ಬರಹವೊಂದನ್ನು ಆರಿಸಿ 
ಲಗತ್ತಿಸಲಾಗುತ್ತದೆ. ಈ ಬಾರಿಯ ವಿಶೇಷ ಬರಹಕ್ಕೆ ಎಲ್ಲರ ಅಭಿಪ್ರಾಯವೂ ಬರಬೇಕೆಂದು ನನ್ನ ಆಶಯ. ನಿಮಗಿಷ್ಟವಾದ 
ಲೇಖನವೊಂದನ್ನು ಆರಿಸಿ ಈ ಪುಟದಲ್ಲಿ ಸಂದೇಶವನ್ನು ಬಿಡಿ:
http://kn.wikipedia.org/w/wiki.phtml?title=Wikipedia_talk:ವಿಶೇಷ ಬರಹ/ಸಂಚಿಕೆ 
- ೩&action=edit&section=new

---
ಕೆಲವು ಉಪಯುಕ್ತ ವಿಕಿ ಸಂಪರ್ಕಗಳು:
http://kn.wikipedia.org/w/wiki.phtml?title=Special:Allpages&from=HomePage 
- ಕನ್ನಡ ವಿಕಿಪೀಡಿಯಾದಲ್ಲಿರುವ ಎಲ್ಲ ಪುಟಗಳು.
http://kn.wikipedia.org/wiki/Special:Imagelist - ಕನ್ನಡ ವಿಕಿಪೀಡಿಯಾದಲ್ಲಿರುವ 
ಚಿತ್ರಗಳ ಪಟ್ಟಿ.


- ಹರಿ ಪ್ರಸಾದ್ ನಾಡಿಗ್

-- 
http://www.hpnadig.net/
http://conjurer.deviantart.com/
sysop & contributor @ http://kn.wikipedia.org/


"The important thing is never to stop questioning."  -- Albert Einstein




More information about the Wikikn-l mailing list