ನಮಸ್ಕಾರ,

 

ತುಳುನಾಡಿನ ಶಾಲೆಗಳಲ್ಲಿ ತುಳುವನ್ನು ಒಂದು ಭಾಷೆಯಾಗಿ ಕಲಿಸುತ್ತಿದ್ದಾರೆ. ತುಳುವನ್ನು ಕಲಿಯುವ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ವಿಷಯಗಳ ಬಗೆಗೆ ತುಳು ವಿಕಿಪೀಡಿಯದಲ್ಲಿ ಲೇಖನಗಳನ್ನು ಸೇರಿಸಿ, ನಂತರ ತುಳು ವಿಕಿಪೀಡಿಯದ ಆಫ್‍ಲೈನ್ ಆವೃತ್ತಿ (Kiwix) ತಯಾರಿಸಿ, ಅವುಗಳನ್ನು ಶಾಲೆಗಳಿಗೆ ತಲುಪಿಸುವ ಒಂದು ಯೋಜನೆಯನ್ನು ತಯಾರಿಸಲಾಗಿದೆ. ಅದಕ್ಕಾಗಿ ವಿಕಿಮೀಡಿಯ ಫೌಂಡೇಶನ್‍ಗೆ ಧನಸಹಾಯಕ್ಕೆ ಅರ್ಜಿಯನ್ನು ಸಲ್ಲಿಸಲಾಗಿದೆ. ಅದು ಇಲ್ಲಿದೆ. ದಯವಿಟ್ಟು ಎಲ್ಲರೂ ಅದನ್ನು ಓದಿ ನಿಮ್ಮ ಸಲಹೆ ಸೂಚನೆಗಳನ್ನು ಆ ಯೋಜನೆಯ ಚರ್ಚಾ ಪುಟದಲ್ಲಿ ದಾಖಲಿಸಿ. ಹಾಗೆಯೇ ಈ ಯೋಜನೆಗೆ ನಿಮಗೆ ಸಮ್ಮತಿ ಇದ್ದಲ್ಲಿ ಅದನ್ನು ಬೆಂಬಲಿಸಬೇಕಾಗಿ ಕೋರುತ್ತೇನೆ.

 

ಸಿಗೋಣ,

ಪವನಜ