ನಾಗಭೂಷಣ ಸ್ವಾಮಿಯವರು ಇಂದು ಬೆಳಿಗ್ಗೆ ಪತ್ರವೊಂದನ್ನು ಕಳುಹಿಸಿದ್ದರು (ವಿಕಿಪೀಡಿಯ ಲಿಸ್ಟ್
ಗೆ ಬಹುಶಃ ಬಂದಿಲ್ಲ). ಓದಿ:
=========================================================================
ನೀವು ಸೂಚಿಸುವ ವಿವರಗಳಿಗೆ ಹೊಂದುವ ಅಚ್ಚಕನ್ನಡ ಪದ ಅರಳಿಕಟ್ಟೆ. ಅರಳಿ ಕಟ್ಟೆಯ ಬಳಿ ಸಂಜೆಯ
ಹೊತ್ತು ಕುಳಿತು ಲೋಕದ ಸುದ್ದಿ ಸಮಾಚಾರವನ್ನೆಲ್ಲ ಜನ ಮಾತಾಡುತ್ತಾರೆ. ಅರಳಿ ಅಥವ ಅಶ್ವತ್ಥವು
ಶಾಶ್ವತದ, ನಿರಂತರತೆಯ ಸಂಕೇತವೂ ಹೌದು. ಅದರ ಬೇರು ಮೇಲೆ, ರಂಬೆ ಕೊಂಬೆ ತಳಗೆ ಎಂಬ ವರ್ಣನೆ,
ಭಗವದ್ಗೀತೆಯದು ಸುಪ್ರಸಿದ್ಧ. ತಂತ್ರಜ್ಞಾನವೂ ಅಷ್ಟೆ. ತಿಳಿದ ಕೆಲವರಿಂದ ಹುಟ್ಟಿ
ತಳಮಟ್ಟದವರೆಗೆ ಹರಿದು ವಿಸ್ತಾರಗೊಳ್ಳಬೇಕಲ್ಲವೇ?
ಇನ್ನೊಂದು ಪದ ಚಾವಡಿ. ಚಾವಡಿ ಕೊಂಚ ಗಂಭೀರವಾದ ಚರ್ಚೆ ನಡೆಯುವ ಜಾಗ.
ಮತ್ತೊಂದು ಪದ ಜಗಲಿ ಕಟ್ಟೆ. ಮನೆಯ ಮುಂದಿನ ಜಗಲಿಯಲ್ಲಿ ನಿರಾಳವಾಗಿ ಹರಟೆ ಹೊಡೆಯುತ್ತ
ಏನೆಲ್ಲ ಮಾತುಗಳು ಬಂದು ಹೋಗುತ್ತವೆ.
ತಕ್ಷಣಕ್ಕೆ ಈ ಮೂರು ಪದಗಳು ಹೊಳೆಯುತ್ತಿವೆ.
=========================================================================
ನನಗೂ ಕೂಡ "ಅರಳಿ ಕಟ್ಟೆ" ತುಂಬಾ ಇಷ್ಟವಾಯಿತು. 'ಜಗಲಿ ಕಟ್ಟೆ' ಕೂಡ ಬಹಳ ಚೆನ್ನಾಗಿ
ಕೂಡುತ್ತದೆ. ಕನ್ನಡದಲ್ಲಿ ಹೇಳಿಕೊಳ್ಳುವಂತಹ ಭಾಷಾ ಜ್ಞಾನ ಇಲ್ಲವಾದ್ದರಿಂದ ಸರಿಯಾದದ್ದು
ಯಾವುದೆಂಬುದು ನನಗೆ ತಿಳಿಯದು. Decision ನಿಮ್ಮೆಲ್ಲರಿಗೆ ಬಿಟ್ಟದ್ದು ;)
- ಹರಿ ಪ್ರಸಾದ್ ನಾಡಿಗ್
On 6/7/05, Rohith Ajjampur <rohith.ajjampur(a)gmail.com> wrote:
ನಿಮ್ಮ ಪತ್ರ ನೋಡಿದ ಕೂಡಲೇ ನನಗೆ ಹೊಳೆದಿದ್ದು ಒಂದೇ ಒಂದು ಪದ,
"ಗ್ರಾಮ ಪಂಚಾಯಿತಿ
ಕಟ್ಟೆ" ಆದರೆ, wikipedia ಗ್ರಾಮವಲ್ಲದ್ದರಿಂದ ಬಹುಷಃ "ಪಂಚಾಯಿತಿ ಕಟ್ಟೆ" ಅಥವಾ
"ಅರಳಿ ಕಟ್ಟೆ"
ಎಂದು ಏಕೆ ಕರೆಯಬಾರದು? ಮತ್ತೊಂದು ವಿಷಯವೆಂದರೆ, ನೀವು policy making ಎಂದು
ಹೇಳಿದಿರಿ, ಹಾಗಾಗಿ, ಆ ಪುಟದಲ್ಲಿ ವಿಚಾರ ವಿನಿಮಯಕ್ಕಿಂತ ಹೆಚ್ಚಾಗಿ ಕ್ರಮಗಳು ಮತ್ತು
ಕಾರ್ಯನೀತಿಯನ್ನು ನೀಡಲಾಗುತ್ತದೆ ಎಂದು ತಿಳಿಯುತ್ತೇನೆ.
ರೋಹಿತ್.
On 6/7/05, Ashwatha Matthur <ashwatham(a)gmail.com> wrote:
> "Village Pump" ಎನ್ನುವುದಕ್ಕೆ "ಚರ್ಚಾ ಚಾವಡಿ" ಎ೦ದು ಇಟ್ಟರೆ ಆಗಬಹುದೇ?
>
> ನಿಜವಾಗಿ "Village Pump" ಎಂಬುದಕ್ಕೆ ಕನ್ನಡದಲ್ಲಿ ಸಮಾನಾಂತರ ಪದ "ಅರಳಿ
ಕಟ್ಟೆ"
> ಇದ್ದೀತು ! :-) ಆದರೆ "ಚರ್ಚಾ ಚಾವಡಿ" ಅದರ ಉದ್ದೇಶಕ್ಕೆ ಸ್ವಲ್ಪ ಹೆಚ್ಚು
> ಹೊಂದುವಂತೆ ಇದೆ.
>
> --ಅಶ್ವತ್ಥ.
>
>
>
> On 6/6/05, Hari Prasad Nadig <hpnadig(a)gmail.com> wrote:
> > hi,
> >
> > ಆಂಗ್ಲ ವಿಕಿಪೀಡಿಯಾ ಉಪಯೋಗಿಸಿದವರಿಗೆ "Village Pump" ಬಗ್ಗೆ ತಿಳಿದೇ
ಇರುತ್ತದೆ.
> > ವಿಲೇಜ್ ಪಂಪ್ = "a page to discuss the technical issues, policies, and
> > operations of Wikipedia".
> >
> > ಕನ್ನಡ ವಿಕಿಪೀಡಿಯಾ ಕೂಡ ದೊಡ್ಡದಾಗುತ್ತಿರುವಂತೆ, ಹಲವು ಸದಸ್ಯರು
> > ಭಾಗವಹಿಸುತ್ತಿರುವಂತೆ, ಇಂತಹ ಒಂದು ಪುಟ ಬೇಕಾಗುವುದು. ಪ್ರಾರಂಭಿಸೋಣ ಎಂದು
> > ಆಲೋಚಿಸಿದೆ. ಆದರೆ ತಕ್ಕಂತ ಕನ್ನಡ ಪದ ಹೊಳೆಯಲಿಲ್ಲ.
> > ಹಳ್ಳಿಯೊಂದರಲ್ಲಿ ಎಲ್ಲರೂ ಕೂಡಿ ಚರ್ಚೆ ಮಾಡುವ ಒಂದು ಜಾಗ ಯಾವುದು? ;) ಆಂಗ್ಲ
> > ವಿಕಿಪೀಡಿಯಾದವರಿಗೆ ಅದು "Village pump". ಕನ್ನಡಿಗರಿಗೆ ಯಾವುದು? ಇದೇ ಅರ್ಥ
> > ಮೂಡಿಸುವಂತಹ ಕನ್ನಡ ಪದವನ್ನು ಸಾಧ್ಯವಾದಲ್ಲಿ ಸೂಚಿಸಿ. ಪುಟವೊಂದನ್ನು
> > ಪ್ರಾರಂಭಿಸೋಣ. ಮುಂದೆ ಕನ್ನಡ ವಿಕಿಪೀಡಿಯಾದ ಬಗ್ಗೆ ಸುದ್ಧಿ, policyಗಳನ್ನ ಅಲ್ಲಿ
> > ಚರ್ಚೆ ಮಾಡೋಣ. ಏನಂತೀರಿ?
> >
> > - ಹರಿ ಪ್ರಸಾದ್ ನಾಡಿಗ್.
> >
--
http://www.hpnadig.net/blog/
"Creativity requires the courage to let go of certainties." ~ Erich
Fromm