ಪ್ರಿಯರೆ,
ನಿಮಗೆಲ್ಲ ತಿಳಿದಿರುವಂತೆ ಇತ್ತೀಚೆಗೆ ಪ್ರಾರಂಭಿಸಿದ 'ಅನುವಾದಗೊಂಡ ಲೇಖನಗಳ ಸಂವರ್ಧನಾ
ಯೋಜನೆ"ಗೆ ಬಹಳಷ್ಟು ಮಂದಿ ಕೈಜೋಡಿಸುವ ಇಚ್ಚೆ ವ್ಯಕ್ತಪಡಿಸಿದ್ದು, ವಿಕಿಪೀಡಿಯ ಸಂಪಾದನೆಯ
ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಯಸಿರುತ್ತಾರೆ. ಈ ಕಾರಣಕ್ಕಾಗಿ, ಇದೇ ಶನಿವಾರ - ಮಾರ್ಚ್
೨೪ ರಂದು ಸಂಜೆ ೫ ಘಂಟೆಗೆ ವಿಕಿಪೀಡಿಯ ಸಮ್ಮಿಲನ ೪ ಮತ್ತು ವಿಕಿ ಕಾರ್ಯಾಗಾರವನ್ನು ಕೆ. ಆರ್
ರಸ್ತೆಯ ಸರ್ವರ್ಲಾಟ್ಸ್ ಕಂಪೆನಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಆಸಕ್ತರು ಈ ಕೆಳಗಿನ ಕೊಂಡಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸುವುದರ ಮೂಲಕ ಕಾರ್ಯಕ್ರಮದಲ್ಲಿ
ನಮ್ಮ ಜೊತೆಗೂಡಬಹುದು.
http://kn.wikipedia.org/wiki/%E0%B2%B5%E0%B2%BF%E0%B2%95
%E0%B2%BF%E0%B2%AA%E0%B3%80%E0%B2%A1%E0%B2%BF%E0%B2%
AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%AA
ಸೂಚನೆ :- ವಿಕಿಪೀಡಿಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಫೇಸ್ಬುಕ್ ಗುಂಪೊಂದನ್ನು
ಸೃಷ್ಟಿಸಲಾಗಿದೆ. ಕಾರ್ಯಕ್ರಮಗಳು, ಇತ್ಯಾದಿಗಳ ಬಗ್ಗೆ ಸುಲಭವಾಗಿ ಇತರರಿಗೆ ತಿಳಿಸಲು ಇದು
ಸಹಕಾರಿಯಾಗಬಲ್ಲದು ಎಂದು ನಮ್ಮ ಅನಿಸಿಕೆ.
ನೀವೂ ಕೂಡ ಈ ಗುಂಪಿಗೆ ಸೇರಬಹುದು ಮತ್ತು ನಿಮ್ಮ ಗೆಳೆಯರನ್ನೂ ಆಮಂತ್ರಿಸಬಹುದು -
www.facebook.com/groups/kannadawikipedia/
ಧನ್ಯವಾದಗಳೊಂದಿಗೆ
--
Omshivaprakash H L | ಓಂಶಿವಪ್ರಕಾಶ್ ಎಚ್.ಎಲ್ | ॐ शिवप्रकाश् एच्. एल्
Kannada SIG
Wikimedia India Chapter
[image: File:Wikimedia India logo.svg] <http://wiki.wikimedia.in/>