Folks, sorry for flooding your mailbox. I just realised a part of text
was in ASCII, sending it again typed in Unicode.
***
ಕೆಲವು ಕಡೆ ಅವಸರದಲ್ಲಿ ಬರೆದ ಹಾಗಿದೆ :) ಜಿಮ್ಮಿ ವೇಲ್ಸ್ - ಜಿಮ್ಮಿ ವೇಲರ್
ಆಗಿಹೋಗಿದೆ, ಇನ್ನೂ ಹಲವಾರು ತಪ್ಪುಗಳಾಗಿವೆ.
ಆದರೂ ಒಟ್ಟಾರೆ ಲೇಖನ ಮಾಹಿತಿ ತುಂಬಿಕೊಂಡಿರುವುದು ಒಪ್ಪುವಂತಹ ವಿಷಯ ;)
ಎಸ್ ಎಲ್ ರವರ ಲೇಖನಕ್ಕೆ ಫೋಟೋ ಇಲ್ಲದಿರುವುದನ್ನು ಪ್ರಸ್ತಾಪಿಸಿರುವುದು ಗಮನಿಸಿದಿರಾ? :)
ಇನ್ನು:
"ಕನ್ನಡದಲ್ಲೂ ಇಂತಹ ಗುರಿ ಮುಟ್ಟುವಂತಾಗಬೇಕು"
ಹೆಚ್ಚು ಜನ ಮುಂದೆ ಬಂದು ನಮ್ಮ ಚಟುವಟಿಕೆಗಳಲ್ಲಿ ಭಾಗಿಯಾದಾಗ ಮಾತ್ರ ಇದು ಸಾಧ್ಯ.
"ಕನ್ನಡ ವಿಕಿಪೀಡಿಯ ಕನ್ನಡಿಗರಿಗೆ ದೊರೆತಿರುವ ಒಂದು
ಸುವರ್ಣಾವಕಾಶ. ತಮ್ಮ ಶ್ರಮ ಮತ್ತು ಸಮಯ ದಾನ ಮಾಡಿ > ಕನ್ನಡ ವಿಕಿಪೀಡಿಯ ಬೆಳೆಸಿದ ಮತ್ತು ಬೆಳೆಸುತ್ತಿರುವ
ಕನ್ನಡಾಭಿಮಾನಿ ಮಿತ್ರರಿಗೆಲ್ಲ ನಾವು ಕೃತಜ್ಞರಾಗಿರಬೇಕು"
ಸದ್ಯ, ಇಷ್ಟಾದರೂ ಸೇರಿಸಿದರಲ್ಲ :) ಕಳೆದ ಬಾರಿ ಪ್ರಜಾವಾಣಿಯಲ್ಲಿ ಸಂಪೂರ್ಣ credit
ವಿಕಿಮೀಡಿಯ ಫೌಂಡೇಶನ್ನಿಗೆ ದಾರೆ ಎರೆದಿದ್ದರು :)
"ನಮ್ಮಲ್ಲಿ ಪಠ್ಯವಷ್ಟೆ ಅಲ್ಲದೆ ಕನ್ನಡ ಮತ್ತು ಕರ್ನಾಟಕದ
ಹಲವಾರು ಮಹನೀಯರಿಗೆ ಸಂಬಂಧಿಸಿದ ಅಪರೂಪದ ಧ್ವನಿ > ಮುದ್ರಿಕೆ, ಸ್ಥಿರ ಹಾಗೂ ವೀಡಿಯೋ ಚಿತ್ರ
ಇತ್ಯಾದಿಗಳಿಗೆ ಒಂದು ಸಮಗ್ರ ಸೂಚಿಯಿಲ್ಲ"
ಇದರ ಬಗ್ಗೆ ಮಾನ್ಯ ಶ್ರೀಧರರವರು ಪ್ರಸ್ತಾಪಿಸಿರುವ ವಿಷಯ ಬಹಳ ಮಹತ್ವದ್ದು.
ಅಮೇರಿಕಾದಲ್ಲಿ ಸರಕಾರದವರ ಬಳಿ ಇರುವ Academic ಬಳಕೆಗೆ ಉಪಯೋಗವಾಗುವಂತಹ
ಚಿತ್ರಗಳು, ಮೀಡಿಯಾ, ಪಬ್ಲಿಕ್ ಡೊಮೈನ್ ನಲ್ಲಿ ಇರುತ್ತವೆಯೆಂಬುದು ನಮಗೆಲ್ಲಾ ತಿಳಿದೇ
ಇದೆ. ಇದೇ ಮಾದರಿ ನಮ್ಮಲ್ಲಿ ಯಾಕೆ ರೂಡಿಸಬಾರದು? ಅಪರೂಪದ ಧ್ವನಿ ಮುದ್ರಿಕೆಗಳನ್ನು
ವಿಕಿಪೀಡಿಯಾಕ್ಕೋ ಅಥವಾ ಕಾಮನ್ಸ್ ವಿಕಿಗೋ ಹಾಕಲು ದೊರೆಯುವಂತೆ ಮಾಡಲು ನಾವು
ಸರಕಾರವನ್ನು ಕೇಳಿಕೊಳ್ಳಬಹುದಲ್ಲವೇ?
- ಹರಿ ಪ್ರಸಾದ್ ನಾಡಿಗ್
On 7/23/05, Pavanaja U B <pavanaja(a)vishvakannada.com> wrote:
--
http://www.hpnadig.net/blog/
"Creativity requires the courage to let go of certainties." ~ Erich
Fromm