ನಮಸ್ಕಾರ,

ಕನ್ನಡ ವಿಕಿಪೀಡಿಯ ಪಾಲಿಸಿಗಳನ್ನು, ಸಹಾಯ ಪುಟಗಳನ್ನು ಆದಷ್ಟು ಬೇಗ ಸಿದ್ಧಪಡಿಸಬೇಕಿದೆ.
ಹೊಸದಾಗಿ ಸೇರುತ್ತಿರುವ ಸದಸ್ಯರಿಗೆ ಇದರಿಂದ ಬಹಳಷ್ಟು ಅನುಕೂಲವಾಗಲಿದೆ.
ಆಂಗ್ಲ ವಿಕಿಪೀಡಿಯ ಪಾಲಿಸಿಗಳನ್ನು, ಸಹಾಯ ಪುಟ್ಗಳನ್ನು ಕನ್ನಡಕ್ಕೆ ಅನುವಾದ ಮಾಡಿ, ಕನ್ನಡ ವಿಕಿಪೀಡಿಯ ಕಾರ್ಯನೀತೆಗೆ ತಕ್ಕಂತೆ ಬದಲಾಯಿಸಿಕೊಳ್ಳಬಹುದು.

೧೫೦೦ ಲೇಖನಗಳ ಮೈಲಿಗಲ್ಲನ್ನು ದಾಟಿದ ಸಂದರ್ಭದಲ್ಲಿ, ನಿಮ್ಮೆಲ್ಲರಿಗೂ ಅಭಿನಂದನೆಗಳು.

ಶುಭವಾಗಲಿ
-ಮನ|Mana

On 4/11/06, Hari Prasad Nadig < hpnadig@gmail.com> wrote:
ಸ್ನೇಹಿತರೆ,

೧೦೦೦ದ ಮೈಲಿಗಲ್ಲಾದ ಮೇಲೆ ಹೆಚ್ಚು ಚಟುವಟಿಕೆಯಿಲ್ಲದೆ ವಿಕಿಪೀಡಿಯ ಸೊರಗಿತ್ತು.
ಇತ್ತೀಚೆಗೆ ವಿಕಿಯಲ್ಲಿ ಚಟುವಟಿಕೆ ಹೆಚ್ಚಾಗಿರುವುದು ಸಂತಸದ ವಿಷಯ. ಚಟುವಟಿಕೆ
ಹೆಚ್ಚಾದಂತೆ, ಭಾಗವಹಿಸುವಿಕೆ ಹೆಚ್ಚಾದಂತೆ ಅದರ ಜೊತೆ ಜೊತೆಗೇ ದೊಡ್ಡದಾಗುವ
ತೊಡಕುಗಳು ಹಾಗೂ ಅಡ್ಡಗಲ್ಲುಗಳು ಸರ್ವೇ ಸಾಮಾನ್ಯ. ಇದನ್ನೆಲ್ಲ ದಾಟಿ ನಾವೆಲ್ಲ
ಮುನ್ನಡೆಯುವೆವು  ಎಂದು ಆಶಿಸುತ್ತೇನೆ.

ಹೊಸ ಮೈಲಿಗಲ್ಲು ತಲುಪುವುದರಲ್ಲಿ ಹೆಚ್ಚು ಶ್ರಮ ಪಟ್ಟವರು ಹೊಸತಾಗಿ ಸದಸ್ಯರಾದ ಮನ,
ಶ್ರೀತ್ರಿ, ಮತ್ತು ಪುನರ್ವಸು - ಇವರುಗಳು. ಇವರು ಕನ್ನಡ ಚಿತ್ರರಂಗದ ಹಲವು
ಮಾಹಿತಿಗಳನ್ನು ಈ ಬಾರಿ ವಿಕಿಪೀಡಿಯಕ್ಕೆ ಸೇರಿಸಿದ್ದಾರೆ.  ದಾಸಸಾಹಿತ್ಯ ಹಾಗೂ ಹಲವು
ಇನ್ನಿತರ ವಿಷಯಗಳ ಬಗ್ಗೆಯೂ ಲೇಖನಗಳನ್ನು ಸೇರಿಸಿದ್ದಾರೆ.
ಇವರೆಲ್ಲರೊಂದಿಗೆ ಪ್ರಶಾಂತ್ ಪಂಡಿತ್, ಇಸ್ಮಾಯಿಲ್, ಹಾಗೂ ಹೊಸ ಸದಸ್ಯರಾದ ವಾಣಿ,
ಸುನಾತ್ ಮತ್ತಿತರರು ಸಾಕಷ್ಟು ಲೇಖನಗಳನ್ನು ಚೊಕ್ಕ ಮಾಡುವಲ್ಲಿ, ಹೊಸ ಲೇಖನಗಳನ್ನು
ಸೇರಿಸುವಲ್ಲಿ ಪಾಲ್ಗೊಂಡಿದ್ದಾರೆ.

ಮುಂದಿನ ದಾರಿ:
1) ಸಮುದಾಯ ಬೆಳೆಯುತ್ತಿದ್ದಂತೆ ಸಮುದಾಯವನ್ನು ಮುನ್ನಡೆಸಲು ಕೆಲವು ಪಾಲಿಸಿಗಳ ಅಗತ್ಯವಿರುವುದು.
ಪಾಲಿಸಿಗಳಿಲ್ಲದ ವಿಿಕಿಪೀಡಿಯ ದುರ್ಬಳಕೆಗೆ ಸುಲಭವಾಗಿ ಕಟ್ಟಿಕೊಟ್ಟ ಅಚ್ಚುಕಟ್ಟಾದ
ವೇದಿಕೆಯಂತಾಗಿಬಿಡಬಹುದು. ಹೊರಗಿನಿಂದ ತಂದ ಜಗಳವನ್ನು ತೀರಿಸಿಕೊಳ್ಳುವ ಛಾವಡಿಯೂ
ಆಗಿಬಿಡಬಹುದು.
ಆದ್ದರಿಂದ ಕನ್ನಡ ವಿಕಿಪೀಡಿಯದಲ್ಲಿ ಈಗ ಪಾಲಿಸಿಗಳ ಅಗತ್ಯ ಎಂದಿಗಿಂತಲೂ ಹೆಚ್ಚು.

2) ಚಿತ್ರಗಳನ್ನು ಹಾಕುವಾಗ ಅದರ ಕಾಪಿರೈಟ್ ಮಾಹಿತಿಯ ಬಗ್ಗೆ ಇದುವರೆಗೂ ನಾವ್ಯಾರೂ
ಅಷ್ಟು ಗಮನ ಕೊಟ್ಟಿಲ್ಲ... ಈಗ ಬಹುಶಃ ಲೈಸೆನ್ಸುಗಳನ್ನು ಟ್ಯಾಗ್ ಮಾಡಿ ಎಲ್ಲ
ಚಿತ್ರಗಳನ್ನೂ ಒಮ್ಮೆ ಭೇಟಿಕೊಟ್ಟು ಕಾಪಿರೈಟ್ ಉಲ್ಲಂಘ ಆಗಿಲ್ಲದಂತೆ ನೋಡಲು, ಹಾಗೂ
ಹಾಗಾಗಿರುವುವನ್ನು ತೆಗೆದುಹಾಕುವುದಕ್ಕೆ ಮುಂದಾಗಲು ಹೈ ಟೈಮ್ ಎಂದು ನನ್ನ ಅನಿಸಿಕೆ.

3) ಸಹಾಯ ಪುಟಗಳು - ಹೊಸ ಸದಸ್ಯರಾಗಿ ಬಂದವರಿಗೆ ವಿಕಿ ಬಳಸಲು ಹೆಚ್ಚಿನ ಮಾಹಿತಿಯಿಲ್ಲ
- ಎಲ್ಲವನ್ನೂ ಆಂಗ್ಲ ಪುಟಗಳಲ್ಲಿ ಓದಿಕೊಳ್ಳಬೇಕು, ಆದರೆ ಬಹಳಷ್ಟು ಜನ ಓದಿಕೊಳ್ಳುವ
ಗೋಜಿಗೂ ಹೋಗುತ್ತಿಲ್ಲ. ಆದ್ದರಿಂದ ಕನ್ನದ ವಿಕಿಯಲ್ಲಿ ಸ್ವಂತದ ಸಹಾಯ ಪುಟಗಳು
ಬೇಕಾಗಿವೆ. ನನಗೆ ತಿಳಿದಂತೆ ಈಗ ಹೆಚ್ಚು ಭಾಗವಹಿಸುತ್ತಿರುವ ಸದಸ್ಯರಿಗೆ ಈ ಮಾಹಿತಿ
ಇಲ್ಲವೇ
೧) ಇತರ ಸದಸ್ಯರಿಂದ ತಲುಪಿದೆ, ೨) ಆಂಗ್ಲ ವಿಕಿಯಿಂದ ಕಲೆತಿದ್ದಾರೆ.
ಇದನ್ನು ಬದಲಾಯಿಸಬೇಕಿದೆ. ಎಲ್ಲ ಹೊಸ ಸದಸ್ಯರಿಗೂ ವಿಕಿಯಲ್ಲಿ ಬರೆಯುತ್ತಿರುವ
ಸ್ನೇಹಿತರಿರುವುದಿಲ್ಲವಷ್ಟೆ. ಆಂಗ್ಲಕ್ಕೆ ಹೋಗಿ ಓದಿಕೊಂಡು ಬಂದು ಬರೆಯುವವರು
ಕಡಿಮೆಯೆ.

- ಹೆಚ್ ಪಿ
_______________________________________________
Wikikn-l mailing list
Wikikn-l@Wikipedia.org
http://mail.wikipedia.org/mailman/listinfo/wikikn-l