Collaboration = ಸಹಯೋಗ

Collaboration of the week = ವಾರದ ಸಹಯೋಗ

 

ಕಾಕತಾಳೀಯ ಎನ್ನುವುದಿದ್ದರೆ ಇದುವೇ. ಕಳೆದ ಭಾನುವಾರವಷ್ಟೆ ನಾನು ದೆಹಲಿಯ ಕನ್ನಡ ಸಂಘದಲ್ಲಿ ಮಹಾಭಾರತದ ಬಗ್ಗೆ ಮಾತನಾಡಿದ್ದೆ. ನನಗೆ ತುಂಬ ಇಷ್ಟವಾದ ಕೃತಿ ಮಹಾಭಾರತ ಮತ್ತು ಆದರಲ್ಲಿ ಅಡಕವಾಗಿರುವ ಭಗವದ್ಗೀತೆ. ಮಹಾಭಾರತದ ಬಗ್ಗೆ ಎಷ್ಟು ಬೇಕಾದರೂ ಮಾತನಾಡಬಲ್ಲೆ. ಹಾಗೆಂದು ಹೇಳಿ, ಈಗ ಬರೆಯಿರಿ ನೋಡೋಣ ಎಂದು ಹೇಳಬೇಡಿJ. ನನಗೆ ಗೊತ್ತಿದ್ದಂತೆ ಮಹಾಭಾರತ ಜಗತ್ತಿನ ಆತಿ ದೊಡ್ಡ ಕೃತಿ. ನೀವು ಬರೆದಂತೆ ಪ್ರಪ೦ಚದಲ್ಲಿ ಎರಡನೇ ಅತಿ ದೊಡ್ಡ ಸಾಹಿತ್ಯ ಕೃತಿ ಅಲ್ಲ. ಮಹಾಭಾರತ ಎಲ್ಲ ಕಾಲಕ್ಕೂ ಎಲ್ಲ ದೇಶಗಳಿಗೂ ಪ್ರಸ್ತುತವಾಗಿರುವ ಕೃತಿ. ಮಹಾಭಾರತದಲ್ಲಿ ಭೀಷ್ಮ ಧರ್ಮರಾಯನಿಗೆ ಕೊಡುವ ಉಪದೇಶಗಳಲ್ಲಿ ಅಡಕವಾಗಿರುವ ಈ ಮಾತುಗಳನ್ನು ಗಮನಿಸಿ-

·         ರಾಜನಾದವನು ತನ್ನ ಪ್ರಜೆಗಳನ್ನು ತುಂಬು ಗರ್ಭಿಣಿಯು ತನ್ನ ಮಗುವನ್ನು ಹೇಗೆ ಕಾಪಾಡುತ್ತಾಳೋ ಹಾಗೆ ಕಾಪಾಡಬೇಕು

·         ರಾಜನಾದವನು ಗುಪ್ತಧನ ಸ್ವೀಕರಿಸಬಾರದು

·

·         ಮರಕಡಿದು, ಅದನ್ನು ಸುಟ್ಟು ಆಗ ದೊರಕುವ ಇದ್ದಿಲನ್ನು ಮಾರಿ ಬದುಕುವವನೊಬ್ಬ; ಗಿಡ ನೆಟ್ಟು, ಬೆಳೆಸಿ, ಅದರಲ್ಲಿ ಬಿಡುವ ಹೂಗಳನ್ನು ಮಾರಿ ಬದುಕುವವ ಇನ್ನೊಬ್ಬ ಈ ಇಬ್ಬರಲ್ಲಿ ಎರಡನೆಯವನೇ ಶ್ರೇಷ್ಟ

·

ಸಿಗೋಣ,

-ಪವನಜ

 

---------------------------------------------------------

 

Dr. U.B. Pavanaja

CEO, Vishva Kannada Softech

http://www.vishvakannada.com/

91-80-23309693, 91-9341980400

Think Globally, Act locally

 

> -----Original Message-----

> From: wikikn-l-bounces@Wikipedia.org [mailto:wikikn-l-

> bounces@Wikipedia.org] On Behalf Of Hari Prasad Nadig

> Sent: Thursday, February 17, 2005 11:04 PM

> To: wikikn-l@wikipedia.org

> Subject: [Wikikn-l (kannada wikipedia)] Collaboration of the week

>

> ಸಾಪ್ತಾಹಿಕ ಸಹಯೋಜನೆ (ಪದ ಸರಿ ಇದೆಯೆ? ತಿಳಿಸಿ)

> --------------------------

>

> ವಾರದಿಂದ ಪ್ರಾರಂಭಿಸಿ ಪ್ರತೀ ವಾರ ವಿಕಿಪೀಡಿಯಾದಲ್ಲಿ "Collaboration of the

> week" ನಡೆಸಲಾಗುವುದು. ಹೆಸರೇ ಸೂಚಿಸುವಂತೆ ಯಾವುದಾದರೂ ಒಂದು ವಿಷಯದ ಬಗ್ಗೆ ಎಲ್ಲರೂ

> ಕೂಡಿ ಬರೆಯುವುದು ಇದರ ಉದ್ದೇಶ. ಇದಲ್ಲದೇ ನಿಜವಾದ 'ವಿಶ್ವಕೋಶ'ವಾಗುವುದಕ್ಕೆ

> ವಿಕಿಪೀಡಿಯಾದಲ್ಲಿ ಸ್ವಲ್ಪವಾದರೂ ದೊಡ್ಡ ಗಾತ್ರದ, ವಿವರಗಳಿಂದ ಕೂಡಿದ ಲೇಖನಗಳು

> ಇರಬೇಕಲ್ಲವೇ?

>

> P.S: ಇದರಲ್ಲಿ ಪಾಲ್ಗೊಳ್ಳುವ ಎಲ್ಲರ ಹೆಸರುಗಳನ್ನೂ ಅಯಾ ಲೇಖನದ ಚರ್ಚೆ ಪುಟದಲ್ಲಿ

> "Contributors to this week's collaboration" ಎಂಬ ಹೆಸರಿನಡಿ

> ಸೇರಿಸಲಾಗುವುದು.

>

> ವಾರದ ಸಹಯೋಜಿತ ವಿಷಯವಾಗಿ "ಮಹಾಭಾರತ" ಲೇಖನವನ್ನು ಶುರು ಮಾಡಿದ್ದೇವೆ.

> (http://tinyurl.com/6c8q9) ದಯಮಾಡಿ ಎಲ್ಲರೂ ಭಾಗವಹಿಸಿ ಇದನ್ನು ಯಶಸ್ವಿಗೊಳಿಸಿ.

>

> --

> http://www.hpnadig.net/blog/

>

> Ring out false pride in place and blood,

> The civic slander and the spite;

> Ring in the love of truth and right,

> Ring in the common love of good.

> ~ Alfred, Lord Tennyson ~