Ashwatha Matthur wrote:
ಮಿತ್ರರೇ,

ಕನ್ನಡ ವಿಕಿಪೀಡಿಯ ೧೫೦ ಲೇಖನಗಳ ಹತ್ತಿರ ಬರುತ್ತಿದೆ! ಇದಕ್ಕೆ ಕಾಣಿಕೆಗಳನ್ನಿತ್ತ
ಎಲ್ಲರಿಗೂ ಅಭಿನ೦ದನೆಗಳು ಮತ್ತು ಧನ್ಯವಾದಗಳು!
  
Unfortunately, ಅಭಿನಂದನೆ ಪಡೆಯಲು ಬಹಳಷ್ಟು ಜನರೇನೂ ಇಲ್ಲ  :P

೧೦೦ ರಿಂದ ೧೫೦ ಲೇಖನದೆಡೆಗೆ ನಡೆಯಲು ಸಹಾಯವಾದದ್ದು  ಪವನಜರವರ ಕೆಲವು ಲೇಖನಗಳು ಹಾಗೂ  ಅಶ್ವತ್ಥರ  ಅನುದಿನ ನಡೆದ ಭಾಷಾಂತರ ;) 
http://kn.wikipedia.org/w/wiki.phtml?title=Special:Newpages&limit=50&offset=0 - ಇತ್ತೀಚೆಗಿನ ಹೊಸ ಲೇಖನಗಳನ್ನು ಪಟ್ಟಿ ಮಾಡುತ್ತದೆ. ಕುತೂಹಲವಿದ್ದಲ್ಲಿ  ತಪ್ಪದೇ ನೋಡಿ ;)

ಇದಲ್ಲದೇ, User Interfaceನ ಉಳಿದ ಹಲವು ಶಬ್ಧಗಳನ್ನು ಅನುವಾದ ಮಾಡುವುದರಲ್ಲಿ  ಅಶ್ವಥ್ ಸಹಾಯ ಮಾಡಿದ್ದಾರೆ.  ಇವರಿಗೆ ಧನ್ಯವಾದಗಳು.  ಈ ಇ-ಮೇಯ್ಲ್ ಓದುತ್ತಿರುವ ಯಾರಾದರೂ ಇದರನುವಾದ ಮಾಡಲು ಉತ್ಸುಕರಾಗಿದ್ದಲ್ಲಿ ಖಂಡಿತ ತಿಳಿಸಿ, ವಿಕಿಪೀಡಿಯಾದಲ್ಲಿ ನಿಮ್ಮ ಅಕೌಂಟ್‌ಗೆ ಸೂಕ್ತ ಅನುಮತಿಗಳನ್ನು  ಕೊಡುವೆ.

ಇವಲ್ಲದೇ, ಮುಖ್ಯಪುಟ ಚೆನ್ನಾಗಿ ಮೂಡಿಬಂದಿದೆ ಎಂದು ಹಲವೆಡೆಗಳಿಂದ ಪ್ರತಿಕ್ರಿಯೆ ಬಂದದ್ದು ಸಂತಸ ತಂದಿತು. ಜರ್ಮನ್ ವಿಕಿಪೀಡಿಯಾದವರೂ ಕೂಡ ಇದನ್ನಿಷ್ಟಪಟ್ಟಿದ್ದು ಂಟು ;)
ಕನ್ನಡ ವಿಕಿಪೀಡಿಯ ಹೀಗೆಯೇ ಮುಂದುವರೆಯಲೆಂದು ಆಶಿಸೋಣ :)

- ಹರಿ ಪ್ರಸಾದ್ ನಾಡಿಗ್
ಹರಿಪ್ರಸಾದ್ ಕಳಿಸಿದ ಅ೦ಕಿ ಅ೦ಶಗಳ ಪುಟ ಬಹಳ ಉಪಯೋಗವಾಯಿತು; ಇತರ ಭಾರತೀಯ ಭಾಷೆಗಳ
ವಿಕಿಪೀಡಿಯ ಮತ್ತು ಕನ್ನಡ ವಿಕಿಪೀಡಿಯದ ಅ೦ಕಿ ಅ೦ಶಗಳನ್ನು ಹೋಲಿಸಿ ನೋಡಿದಾಗ ಗಮನಕ್ಕೆ
ಬ೦ದ ಅ೦ಕಿ ಅ೦ಶಗಳು:

೧. ಲೇಖನಗಳ ಸ೦ಖ್ಯೆಯ ದೃಷ್ಟಿಯಿ೦ದ, ಕನ್ನಡ ವಿಕಿಪೀಡಿಯ ನಾಲ್ಕನೆ ಸ್ಥಾನದಲ್ಲಿದೆ
(ಭಾರತೀಯ ಭಾಷೆಗಳಲ್ಲಿ): ಸ೦ಸ್ಕೃತ (೧೦೦೦+), ಹಿ೦ದಿ (೨೦೦+), ತಮಿಳು ಮೊದಲ ಮೂರು
ಸ್ಥಾನಗಳಲ್ಲಿವೆ.

೨. ಒಳ್ಳೆಯ ಸುದ್ದಿಯೆ೦ದರೆ ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳ ಸ೦ಖ್ಯೆ ಇತರ
ಭಾಷೆಗಳಿಗಿ೦ತ ಬೇಗ ಹೆಚ್ಚುತ್ತಿದೆ.

೩. ಕನ್ನಡ ವಿಕಿಪೀಡಿಯದಲ್ಲಿ ಎಲ್ಲಕ್ಕಿ೦ತ ಹೆಚ್ಚು ಚಿತ್ರಗಳ ಸ೦ಖ್ಯೆಯಿದೆ (ಸುಮಾರು
೧೫೦). ಸರಾಸರಿ ಪ್ರತಿ ಲೇಖನಕ್ಕೆ ಒ೦ದು ಚಿತ್ರ.

೪. ಸಕ್ರಿಯ ಸದಸ್ಯರ ಸ೦ಖ್ಯೆಯ ದೃಷ್ಟಿಯಿ೦ದ ೨ ನೇ ಸ್ಥಾನದಲ್ಲಿದೆ (ಹಿ೦ದಿ ಮೊದಲ ಸ್ಥಾನ). 
 
೫. ಕನ್ನಡ ವಿಕಿಪೀಡಿಯ ಮೇಲಿನ ಭಾಷೆಗಳಲ್ಲಿ ಕೊನೆಯ ಸ್ಥಾನದಲ್ಲಿರುವುದು ದೈನಿಕ
ವಿಸಿಟ್ ಗಳ ದೃಷ್ಟಿಯಿ೦ದ. ದಿನಕ್ಕೆ ಸರಾಸರಿ ೭೭ ಭೇಟಿಗಳು (ವಿಸಿಟ್) ಕನ್ನಡ
ವಿಕಿಪೀಡಿಯದಲ್ಲಿ ನಡೆಯುತ್ತಿವೆ..

ಒಟ್ಟಾರೆ ಕನ್ನಡ ವಿಕಿಪೀಡಿಯ ಚೆನ್ನಾಗಿ ಸಾಗುತ್ತಿದೆ. ಆದಷ್ಟು ಭೇಟಿ ಕೊಡಿ - ನಿಮ್ಮ
ಸ್ನೇಹಿತರನ್ನೂ ಇಲ್ಲಿಗೆ ಭೇಟಿ ಕೊಡುವ೦ತೆ ಪ್ರೋತ್ಸಾಹಿಸಿ !!

ಧನ್ಯವಾದಗಳೊ೦ದಿಗೆ,
  ನಿಮ್ಮ ವಿಶ್ವಾಸಿ,
    ಅಶ್ವತ್ಥ.  


  

_______________________________________________ Wikikn-l mailing list Wikikn-l@Wikipedia.org http://mail.wikipedia.org/mailman/listinfo/wikikn-l


-- 
http://www.hpnadig.net/
http://conjurer.deviantart.com/
sysop & contributor @ http://kn.wikipedia.org/


"The important thing is never to stop questioning."  -- Albert Einstein