ನಮಸ್ಕಾರ,

      ಈ ಬಾರಿಯ ಸಹಯೋಗ ಲೇಖನ : ಯಕ್ಷಗಾನ, ನಮ್ಮಲ್ಲಿ ಬಹಳಷ್ಟು ಜನ ಮಲೆನಾಡಿನವರು ಎಂಬುದು ತಿಳಿದಿದ್ದೇನೆ, ಆದ್ದರಿಂದ ಈ ಲೇಖನಕ್ಕೆ ಬಹಳಷ್ಟು ಮಾಹಿತಿ ಸೇರಿಸುವುದು ಸಾಧ್ಯವಾಗುವುದೆಂದು ನಂಬುವೆ. ಲೇಖನ ಇಲ್ಲಿದೆ:
http://kn.wikipedia.org/wiki/ಯಕ್ಷಗಾನ
      ವಾರದ ಸಹಯೋಗಕ್ಕೆ ಆಯ್ಕೆ ಮಾಡಿದ ಲೇಖನ ಹಲವು ವಾರಗಳಿಗೆ ಮುಂದುವರೆಯುತ್ತಿರುವುದನ್ನು ನೀವು ಗಮನಿಸಿರಬಹುದು. ಇನ್ನಷ್ಟು ಸಕ್ರಿಯ ಸದಸ್ಯರು ಬರುವ ತನಕ ಬಹುಶಃ ಇದು ಮುಂದುವರೆಯುವುದು.

ಈ ಬಾರಿ ಸಂಪಾದನೆಗೆ ಸಹಾಯವಾಗಲೆಂದು ಕೆಲವು FAQಗಳನ್ನು ತಯಾರಿಸಿದ್ದೇನೆ...
http://kn.wikipedia.org/wiki/WP:HOWTO

ಅಲ್ಲದೇ, ಸಮುದಾಯ ಪುಟ ಈಗ (Almost) ರೆಡಿ.
ಭೇಟಿ ಕೊಡಿ:
http://kn.wikipedia.org/wiki/WP:CP

ಕೆಲವೊಂದು ಪಾಲಿಸಿಗಳನ್ನ ಸದ್ಯದಲ್ಲೇ ರೂಡಿಸಬೇಕಾಗಿ ಬರಬಹುದು... ಇದಕ್ಕೆ ನಿಮ್ಮೆಲ್ಲರ ಸಹಕಾರ ಕೋರುತ್ತೇನೆ. ರೂಢಿಸಬೇಕಾದ ಭಾಷೆಯ ಮೌಲ್ಯಗಳ ಕುರಿತ, ಭಾಷಾಂತರಕ್ಕೆ ಸಂಬಂಧಿಸಿದ ಹಾಗೂ ಇನ್ನಿತರ ಅಂಶಗಳ ಬಗ್ಗೆ ಆಂಗ್ಲ ವಿಕಿಪೀಡಿಯದಂತೆ ಕಾರ್ಯನೀತಿಗಳನ್ನು ಪಟ್ಟಿ ಮಾಡಬೇಕಿದೆ.
ಸಾಧ್ಯವಾದಷ್ಟು ಇದನ್ನೋದುತ್ತಿರುವ ಎಲ್ಲರೂ ಅರಳಿ ಕಟ್ಟೆಯಲ್ಲಿ ನಿಮ್ಮ ಸಲಹೆಗಳನ್ನು ಬರೆಯುವ ಮೂಲಕವೋ ಅಥವಾ ವಿಶೇಷ ಲೇಖನ ಕಾಲಂಗೆ ಲೇಖನಗಳನ್ನು ಸೂಚಿಸುವ ಮೂಲಕವೋ ಸಕ್ರಿಯವಾಗಿ ತೊಡಗಿಸಿಕೊಳ್ಳುವಿರೆಂದು  ಆಶಿಸುತ್ತೇನೆ.

***

ಕನ್ನಡ ವಿಶ್ವಕೋಶ ೭೦೦ ಲೇಖನಗಳನ್ನು ದಾಟುವತ್ತ ಸಾಗಿದೆ. ಈ ಬಾರಿ ಬಸವರಾಜ ತಳವಾರ್ ರವರು ಪ್ರಾರಂಭಿಸಿದ ನೂರಾರು ಚುಟುಕು ಲೇಖನಗಳು (Stubs) ಈ ವೇಗದ ಸಂಖ್ಯಾ ಸ್ಪೋಟಕ್ಕೆ ಕಾರಣ. ಅಲ್ಲದೇ ಇತ್ತೀಚೆಗೆ ವಿಕಿಪೀಡಿಯದಲ್ಲಿ ಬರೆಯಲಾರಂಭಿಸಿದ ಅರುಣ್, ಕೆಲವು ಒಳ್ಳೆಯ  ಲೇಖನಗಳನ್ನು ಸೇರಿಸಿರುವರು.  ಅಶ್ವಥ್, ರೋಹಿತ್ ಕೂಡ ಬರೆಯುತ್ತಿರುವರು, ನಾನೂ ಕೂಡ ಹಲವಾರು ಲೇಖನಗಳನ್ನು ಸೇರಿಸಿರುವೆ. ಇನ್ನಷ್ಟು ಜನ ಕೈಸೇರಿಸಿದಲ್ಲಿ ಭರದಿಂದ ಸಾಗಬಹುದು. :)
(ಪಕ್ಕದ ಮರಾಠಿ ಭಾಷೆ ಹಾಗೂ ತಮಿಳು ಭಾಷೆಗಳ ವಿಕಿಪೀಡಿಯಾಗಳು ೧೦೦೦ ಲೇಖನಗಳನ್ನು ದಾಟಿಯಾಗಿದೆ).

- ಹರಿ ಪ್ರಸಾದ್ ನಾಡಿಗ್

--
http://www.hpnadig.net/blog/

"Creativity requires the courage to let go of certainties." ~ Erich
Fromm