The following text is in Kannada unicode. If you are not able to see it properly, please refer to this page:
http://kn.wikipedia.org/wiki/Wikipedia:Kannada_Support

ಗೆಳೆಯರೆ,

ಎಲ್ಲರಿಗೂ ಗೌರಿ ಮತ್ತು ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು!

ವಿವಿಧ ಕನ್ನಡ ಚಲನಚಿತ್ರಗಳ ಬಹಳಷ್ಟು ಲೇಖನಗಳು ವಿಕಿಪೀಡಿಯದಲ್ಲಿ ಸ್ಥಾಪನೆಯಾಗಿವೆ.
ಲೇಖನದ ಹೆಸರಿನಲ್ಲಿ   '(ಚಲನಚಿತ್ರ)' ಎಂದು ಸೇರಿಸಬೇಕೆ? ಬೇಡವೆ? ಸೇರಿಸಬೇಕೆಂದಿದ್ದರೆ ಯಾವಾಗ ಸೇರಿಸಬೇಕು? ಯಾವಾಗ ಸೇರಿಸುವ ಅವಶ್ಯಕತೆಯಿಲ್ಲ? ಎಂಬುದು ಚರ್ಚೆಯಾಗಬೇಕಿದೆ.

ಇದರ ಬಗ್ಗೆ ಅರಳಿಕಟ್ಟೆಯಲ್ಲಿ ಚರ್ಚೆ ಪ್ರಾರಂಭವಾಗಿ, ಕೊನೆಗೆ ಈ mailing-listನಲ್ಲಿ ಚರ್ಚೆಯಾಗಲಿ, ಇತರರ ಅಭಿಪ್ರಾಯವೂ ಧ್ವನಿಗೂಡಲಿ ಎಂದು ನಿರ್ಧಾರವಾಯಿತು. ಅದರ ಫಲವೇ, ಈ ಅಂಚೆ.

ನನ್ನ ಅಭಿಪ್ರಾಯ ಹೀಗಿದೆ:
ಚಲನಚಿತ್ರಗಳ ಹೆಸರು ವ್ಯಕ್ತಿ, ಊರು, ವಿಷಯ/ವಸ್ತುವಿನ ಹೆಸರಾಗಿದ್ದು, ಆ ಹೆಸರಿನ ಲೇಖನ ವಿಕಿಪೀಡಿಯದಲ್ಲಿ ಬರುವ ಸಾಧ್ಯತೆ  ಇದ್ದಲ್ಲಿ ''' (ಚಲನಚಿತ್ರ)''' ಎಂದು ಸೇರಿಸಬೇಕು.

ಉದಾಹರಣೆ: ಧೂಮಕೇತು (ಚಲನಚಿತ್ರ), ರಣಧೀರ ಕಂಠೀರವ (ಚಲನಚಿತ್ರ), ಇಮ್ಮಡಿ ಪುಲಿಕೇಶಿ (ಚಲನಚಿತ್ರ), ಕಿತ್ತೂರು ಚೆನ್ನಮ್ಮ (ಚಲನಚಿತ್ರ), ಚದುರಂಗ (ಚಲನಚಿತ್ರ), ಉಪೇಂದ್ರ (ಚಲನಚಿತ್ರ) ಇತ್ಯಾದಿ.

''(ಚಲನಚಿತ್ರ)'' ಎಂದು ಸೇರಿಸದೆ ಇರುವ ಲೇಖನಗಳು, ಆಯಾ ವಸ್ತು, ವ್ಯಕ್ತಿ, ವಿಷಯಗಳ ಬಗ್ಗೆಯಾದ್ದಾಗಿರುತ್ತದೆ.  ಮೇಲ್ಕಾಣಿಸಿದ ಲೇಖನಗಳ ಹೆಸರುಗಳು (ಚಲನಚಿತ್ರ) ಎಂದು ಸೇರಿಸದೆ ಇದ್ದಾಗ ಈ ಕೆಳಕಂಡ ಲೇಖನಗಳಾಗಿರುತ್ತವೆ:

ಧೂಮಕೇತು -> ಬಾಹ್ಯಾಕಾಶ ವಸ್ತುವಿನ ಬಗ್ಗೆ
ರಣಧೀರ ಕಂಠೀರವ -> ಕನ್ನಡದ ಅರಸನ ಬಗ್ಗೆ
ಇಮ್ಮಡಿ ಪುಲಿಕೇಶಿ -> ಚಾಲುಕ್ಯರ ದೊರೆ ಎರಡನೆ ಪುಲಿಕೇಶಿಯ ಬಗ್ಗೆ
ಕಿತ್ತೂರು ಚೆನ್ನಮ್ಮ -> ಕಿತ್ತೂರಿನ ವೀರವನಿತೆ, ಮಲ್ಲಸರ್ಜನ ಹೆಂಡತಿ, ಚೆನ್ನಮ್ಮ ಅವರ ಬಗ್ಗೆ

ಚದುರಂಗ -> ಸಾಹಿತಿ ಚದುರಂಗ ಅವರ ಬಗ್ಗೆ.
ಚದುರಂಗ (ಆಟ) -> ಚದುರಂಗದ ಆಟದ ಬಗ್ಗೆ (chess)
ಉಪೇಂದ್ರ -> ನಟ, ನಿರ್ದೇಶಕ, ಉಪೇಂದ್ರ ಅವರ ಬಗ್ಗೆ

ಉಳಿದ ಚಿತ್ರಗಳಿಗೆ, ''' (ಚಲನಚಿತ್ರ)''' ಎಂದು ಹಾಕುವ ಅವಶ್ಯಕತೆಯಿರುವುದಿಲ್ಲ, ಅಲ್ಲವೆ?

ಉದಾಹರಣೆ:  ನಂಜುಂಡಿ ಕಲ್ಯಾಣ, ಗೋವಾದಲ್ಲಿ ಸಿ.ಐ.ಡಿ. ೯೯೯, ನಕ್ಕರೆ ಅದೇ ಸ್ವರ್ಗ, ಅವಳೇ ನನ್ನ ಹೆಂಡತಿ, ಕುಂಕುಮ ತಂದ ಭಾಗ್ಯ, ಬಲು ಅಪರೂಪ ನಮ್ಮ ಜೋಡಿ, ಸೋತು ಗೆದ್ದವಳು, ಕಿಟ್ಟು ಪುಟ್ಟು  ಮುಂತಾದ ಪುಟಗಳನ್ನು ಅದೇ ಹೆಸರಿನಲ್ಲಿಡಬಹುದೆಂದು ನನ್ನ ಅಭಿಪ್ರಾಯ.
ಈ ಹೆಸರುಗಳಲ್ಲಿ ಬೇರಾವುದೇ ಲೇಖನಗಳು ಬರಲು ಸಾಧ್ಯತೆಗಳು ಅತ್ಯಂತ ಕಡಿಮೆ ಅಥವಾ ಇಲ್ಲವೇ ಇಲ್ಲ. ಹಾಗೆ ಬಂದರೂ ಆಗ ದ್ವಂದ್ವನಿವಾರಣೆ(disambiguation) ತಂತ್ರವನ್ನು ಅನುಸರಿಸಬಹುದು.

ಈ ವಿಚಾರದಲ್ಲಿ ನಿಮ್ಮೆಲ್ಲರ ಅಭಿಪ್ರಾಯದ ಅವಶ್ಯಕತೆ ಇದೆ. ದಯವಿಟ್ಟು ತಿಳಿಸಿರಿ.

ಧನ್ಯವಾದಗಳು,
- ಮನ