ನಮಸ್ಕಾರ,

    ಕನ್ನಡ ವಿಶ್ವಕೋಶ ೨೦೦ ಲೇಖನಗಳೆಡೆಗೆ ಸಾಗುತ್ತಿದೆ.  ಎಂದಿನಂತೆ ೨೦೦ನೇ ಲೇಖನವನ್ನು ಒಂದು ಸ್ವಾರಸ್ಯಕರ ಲೇಖನದಿಂದ ತುಂಬಿಸೋಣ... ಎಲ್ಲರೂ ಮುಂದೆ ಬಂದು ನಿಮ್ಮ ನಿಮ್ಮ ನೆಚ್ಚಿನ ವಿಷಯವನ್ನು ಆಲೋಚಿಸಿ, ಲೇಖನವನ್ನು ವಿಕಿಪೀಡಿಯಾಗೆ ಲಗತ್ತಿಸಿ. ೨೦೦ನೇ ಲೇಖನವನ್ನು ವಿಶೇಷ ಬರಹವನ್ನಾಗಿ ಮುಖಪುಟಕ್ಕೆ ಜೋಡಿಸೋಣವಂತೆ!
ಇನ್ನೂರರೆಡೆಗೆ ಶರವೇಗದಲ್ಲಿ ಸಾಗಿದುದರ ಗೌರವ ಈ ಬಾರಿ ಲೇಖನಗಳ ಸಂಪಾದನೆಯಲ್ಲಿ ಪ್ರಮುಖ ಪಾತ್ರವಹಿಸಿದ ಅಶ್ವಥ್‌ರವರಿಗೆ ಸಲ್ಲಬೇಕು. ಹಿಂದಿನ ಕೆಲವು ತಿಂಗಳಲ್ಲಿ ಪ್ರತಿ ದಿನಕ್ಕೆ ಸರಾಸರಿ ೨ ಲೇಖನಗಳ ಜೋಡಣೆಯಾಗಿದೆ. ಇದು ಸಂತಸದ ಸುದ್ಧಿಯಾದರೂ ಈ ಕೆಳಕಂಡ ಸಮಸ್ಯೆಗಳು ನನ್ನ ಗಮನಕ್ಕೆ ಬಂದುವು:

೧) ಓದುಗರ ಸಂಖ್ಯೆ ಅಷ್ಟಾಗಿ ಹೆಚ್ಚಿಲ್ಲ.
             - ಕಾರಣ ಹಲವರಿಗೆ ವಿಕಿಪೀಡಿಯಾ ಬಗ್ಗೆ ಗೊತ್ತಿಲ್ಲ! ಕೆಲವು ದಿನಗಳ ಹಿಂದೆ ವೆಬ್‌ಸೈಟ್ ಒಂದರಲ್ಲಿ ಚುಟುಕು ಮಾಹಿತಿಯೊಂದಿಗೆ ಸಂಪರ್ಕ ಹಾಕಿದ್ದ ನನಗೆ ಹಲವು emailಗಳು ಬಂದವು. ಜನರಲ್ಲಿ ಇದರ ಬಗ್ಗೆ ಉತ್ಸಾಹ ಖಂಡಿತ ಇರುವುದು, ಆದರೆ ಅವರಿಗೆ ಇದರ ಬಗ್ಗೆ ತಿಳಿಯುವುದು ಹೇಗೆ?

೨) ನಾವುಗಳು ಪೇರಿಸಿರುವ ಲೇಖನಗಳು ಉಪಯುಕ್ತವಾಗಿವೆಯೇ? ಇಲ್ಲವಾದಲ್ಲಿ ಇಲ್ಲಿಂದ ಮುಂದೆ ಯಾವ ರೀತಿಯ ಲೇಖನಗಳನ್ನು ಸಂಪಾದಿಸಬೇಕು, ಎಂತಹ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವುದು ಎಂಬುದರ ಬಗ್ಗೆ ಅಲ್ಪವಾಗಿ ಆಲೋಚನೆ ನಡೆಯಬೇಕೆ?

ಇದರ ಬಗೆಗೆ ವಿಕಿಪೀಡಿಯಾದಲ್ಲಿ ನಾವು ನಡೆಸಿದ ಚರ್ಚೆ ಇಲ್ಲಿದೆ:

--------------
೨೦೦ ದಾಟುತ್ತಲೇ ಇನ್ನು ಮುಂದೆ ಸಂಪಾದನೆ ಮಾಡಬೇಕಿರುವ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಒಂದು ದಿಶೆಯತ್ತ ಸಾಗಿದಲ್ಲಿ ಉತ್ತಮ ಎಂದನಿಸುತ್ತದೆ... ಏಕೆಂದರೆ ನಾವಿಬ್ಬರೇ ಬಹಳಷ್ಟು ವಿಷಯಗಳ ಬಗ್ಗೆ ಬರೆಯಲಾಗದು. ಜನರು ಇಷ್ಟಪಡುವ, ಓದಿ ಅದರಲ್ಲಿ ಪಾಲ್ಗೊಳ್ಳುವಂತಹ ಲೇಖನಗಳನ್ನು ಬರೆಯುವುದು ಸೂಕ್ತವೆಂದು ನನ್ನ ಅಭಿಪ್ರಾಯ. ಓದುಗರ ಸಂಖ್ಯೆ ನಾವು ಅಪೇಕ್ಷಿಸಿದಂತೆ ಹೆಚ್ಚಿಲ್ಲ. ಆದ್ದರಿಂದ ಜನರಿಗೆ ಸಾಮಾನ್ಯವಾಗಿ ಲಭ್ಯವಾಗದ, ಉತ್ಸಾಹ ಮೂಡಿಸುವ ಲೇಖನಗಳ ಬಗೆಗೆ ನಾವು ಗಮನಹರಿಸಬೇಕು. ಸಾಮಾನ್ಯವಾಗಿ ವಿಜ್ಞಾನ, ಪಠ್ಯದಲ್ಲಿರದ ಇತಿಹಾಸ - ಇವು ಇಂತಹ ವಿಷಯಗಳು. ಇಂಗ್ಲಿಷ್ ವಿಕಿಪೀಡಿಯಾದಲ್ಲಿ ಇವು ಬಹಳವಾಗಿವೆ.. ನಾವೇಕೆ ಅಂತಹ ಲೇಖನಗಳನ್ನು ಅನುವಾದ ಮಾಡಬಾರದು? --hpnadig ೨೧:೨೦, ೩೧ ಡಿಸೆಂಬರ್ ೨೦೦೪ (UTC)
ನಿಜ, ೨೦೦ ದಾಟಿದ ಮೇಲೆ ಸ್ವಲ್ಪ directionality ಬೇಕು; ಈಗ ಇರುವ ಮುಕ್ಕಾಲು ಲೇಖನಗಳಲ್ಲಿ ಇರುವ ಮಾಹಿತಿ ಎಲ್ಲರಿಗೂ ತಿಳಿದಿರುವ೦ಥದ್ದೇ :-) ಉತ್ಸಾಹ ಮೂಡಿಸುವ ಲೇಖನಗಳನ್ನು ಹುಡುಕಬಹುದೇನೊ, ಆದರೆ ಈಗಿನ ತೊ೦ದರೆ ಎ೦ದರೆ ಹೆಚ್ಚು ಜನರಿಗೆ ವಿಕಿ ಬಗ್ಗೆ ಗೊತ್ತಿದ್ದ೦ತೆ ಇಲ್ಲ, ಹಾಗಾಗಿ ಬರೆಯುತ್ತಿರುವ ಲೇಖನಗಳು ಯಾವುವೇ ಆದರೂ ಓದುಗರು ಬರದೇ ಇದ್ದರೆ ಉಪಯೋಗ ಇಲ್ಲ :-(
--------------
ಇವುಗಳ ಬಗ್ಗೆ ನಿಮ್ಮೆಲ್ಲರ ಅಭಿಪ್ರಾಯವನ್ನು ಅಪೇಕ್ಷಿಸುತ್ತೇನೆ.

ಇದಲ್ಲದೇ ವಿಕಿಪೀಡಿಯಾ ಬಗ್ಗೆ ತಿಳಿದವರಿಗಿಂತ ತಿಳಿಯದವರೇ ಹೆಚ್ಚು. ಇದನ್ನೋದುತ್ತಿರುವ ನೀವೆಲ್ಲರೂ ವಿಕಿಪೀಡಿಯಾ ಕುರಿತು ತಿಳಿದವರಿಗೆ ಒಂದೆರಡು ಮಾತು ಹಾಕಿದಲ್ಲಿ ಬಹುಶಃ ಸಹಾಯವಾಗಬಹುದು. ಈಗಿರುವ ಓದುಗರ ಸಂಖ್ಯೆ ಕಡಿಮೆ ಎಂದಲ್ಲ, ಆದರೆ ಹೆಚ್ಚು ಜನ ಭಾಗವಹಿಸಿದಷ್ಟು  ಉತ್ತಮ.

- ಹರಿ ಪ್ರಸಾದ್ ನಾಡಿಗ್


-- 
http://www.hpnadig.net/
http://hpnadig.weblogs.us/
http://conjurer.deviantart.com/
sysop & contributor @ http://kn.wikipedia.org/ 

'Tis the gift to be simple, 'tis the gift to be free,
'Tis the gift to come down where we ought to be,
And when we find ourselves in the place just right,
'Twill be in the valley of love and delight.
~ Joseph Brackett ~